12ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ

Maths Paper Leak
Highlights

ಸಿಬಿಎಸ್‌ಇ 12ನೇ ತರಗತಿಯ ಗಣಿತ ಪ್ರಶ್ನೆ ಪತ್ರಿಕೆ ಒಂದು ದಿನದ ಮುಂಚೆ ಸೋರಿಕೆಯಾಗಿತ್ತು ಎಂಬ ಸುದ್ದಿಗಳು ಹರಿದಾಡುತ್ತಿವೆ.

ನವದೆಹಲಿ: ಸಿಬಿಎಸ್‌ಇ 12ನೇ ತರಗತಿಯ ಗಣಿತ ಪ್ರಶ್ನೆ ಪತ್ರಿಕೆ ಒಂದು ದಿನದ ಮುಂಚೆ ಸೋರಿಕೆಯಾಗಿತ್ತು ಎಂಬ ಸುದ್ದಿಗಳು ಹರಿದಾಡುತ್ತಿವೆ.

3ನೇ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ವಾಟ್ಸಪ್ ವಿಡಿಯೋವೊಂದು ಲಭ್ಯ ವಾಗಿದೆ. ಈ ಹಿನ್ನೆಲೆಯಲ್ಲಿ ಈ ಆರೋಪ ಮತ್ತು ವಿಡಿಯೋ ಕುರಿತು ತನಿಖೆ ನಡೆಸುವುದಾಗಿ ದೆಹಲಿಯ ಕ್ರೈಬ್ರ್ಯಾಂಚ್ ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆತಂಕದ ಮಡುವಿಗೆ ತಳ್ಳಿರುವ ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಹಗರಣ ಇದೀಗ ಸುಪ್ರೀಂಕೋರ್ಟ್ ಮೆಟ್ಟಿ ಲೇರಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಮರುಪರೀಕ್ಷೆಗೆ ನಿರ್ಧರಿಸಿರುವ ಸಿಬಿಎಸ್‌ಇ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಮಾ.26ರಂದು ನಡೆಸಲಾಗಿದ್ದ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಏ.25 ರಂದು ಮರುಪರೀಕ್ಷೆ ನಡೆಸುವುದಾಗಿ ಸಿಬಿಎಸ್‌ಇ ಪ್ರಕಟಿಸಿತ್ತು. ಆದರೆ ಆರೋಪದ ಕುರಿತು ಯಾವುದೇ ಸೂಕ್ತ ತನಿಖೆ ನಡೆಸದೆಯೇ, ಮರುಪರೀಕ್ಷೆಗೆ ನಿರ್ಧರಿಸುವ ಸಿಬಿಎಸ್‌ಇ ಕ್ರಮ ಸೂಕ್ತವಾಗಿಲ್ಲ. ಹೀಗಾಗಿ ಮರುಪರೀಕ್ಷೆಗೆ ತಡೆ ಕೋರಿ ದೆಹಲಿಯ ರೀಪಕ್ ಕನ್ಸಲ್ ಎಂಬುವವರು ಶನಿವಾರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

loader