ಮಾತೆ ಮಹಾದೇವಿ ಉತ್ತರಾಧಿಕಾರಿ ಯಾರು..?
ಅನಾರೋಗ್ಯದಿಂದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದು, ಅವರ ಉತ್ತರಾಧಿಕಾರಿಯನ್ನು ಈಗಾಗಾಲೇ ನೇಮಕ ಮಾಡಲಾಗಿದೆ.
ಬೆಂಗಳೂರು : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಹಾಗೂ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ (74) ಅವರು ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾದರು.
ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಈ ಹಿಂದೆಯೇ ಸೂಚನೆ ನೀಡಿರುವಂತೆ ಜಗದ್ಗುರು ಮಾತೆ ಗಂಗಾದೇವಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಲಾಗಿದೆ.
ಮುಂದಿನ ವಿಧಿ- ವಿಧಾನಗಳನ್ನು ಗಂಗಾದೇವಿ ಅವರು ನಡೆಸಿಕೊಡುತ್ತಾರೆ ಎಂದು ಚೆನ್ನಬಸವೇಶ್ವರ ಜ್ಞಾನ ಪೀಠದ ಪೀಠಾಧ್ಯಕ್ಷ ಚೆನ್ನಬಸವಾನಂದ ಸ್ವಾಮೀಜಿ ಘೋಷಿಸಿದರು. ಈ ವೇಳೆ ಮಾತೆ ಮಹಾದೇವಿ ಅವರನ್ನು ನೆನೆದು ಮಾತನಾಡಿದ ಮಾತೆ ಗಂಗಾದೇವಿ ಕಣ್ಣೀರಿಟ್ಟರು.