ಜಲಾಶಯದಲ್ಲಿ ನಡೆದ ದುರಂತ ಸಂಬಂಧ ಚಿತ್ರತಂಡದ ವಿರುದ್ಧ ಎಫ್​​ಐಆರ್​​ ದಾಖಲಾಗಿತ್ತು. ಪೊಲೀಸರು ಐಪಿಸಿ ಸೆಕ್ಷನ್ 188, 304, 34 ಅಡಿ ಚಿತ್ರ ತಂಡದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಮೊದಲ ಆರೋಪಿಯಾಗಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು 2ನೇ ಆರೋಪಿಯಾಗಿದ್ದ ನಿರ್ದೇಶಕ ನಾಗಶೇಖರ್, 4ನೇ ಆರೋಪಿಯಾಗಿದ್ದ ರವಿವರ್ಮಾ ಇವತ್ತು ಪೊಲೀಸರಿಗೆ ಶರಣಾಗಿದ್ದಾರೆ. ಆದ್ರೆ, 3ನೇ ಆರೋಪಿ ಸಹ ನಿರ್ದೇಶಕ ಸಿದ್ದು, ಹಾಗೂ ಯೂನಿಟ್ ಮ್ಯಾನೇಜರ್ ಭರತ್ ಇನ್ನೂ ತಲೆಮರೆಸಿಕೊಂಡಿದ್ದಾರೆ.

ಬೆಂಗಳೂರು(ನ.12): ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ರವಿವರ್ಮ ಹಾಗೂ ನಿರ್ದೇಶಕ ನಾಗಶೇಖರ್​​ ಮಾಗಡಿ ಪೊಲೀಸರಿಗೆ ಶರಣಾಗಿದ್ದಾರೆ.

ಜಲಾಶಯದಲ್ಲಿ ನಡೆದ ದುರಂತ ಸಂಬಂಧ ಚಿತ್ರತಂಡದ ವಿರುದ್ಧ ಎಫ್​​ಐಆರ್​​ ದಾಖಲಾಗಿತ್ತು. ಪೊಲೀಸರು ಐಪಿಸಿ ಸೆಕ್ಷನ್ 188, 304, 34 ಅಡಿ ಚಿತ್ರ ತಂಡದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಮೊದಲ ಆರೋಪಿಯಾಗಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇನ್ನು 2ನೇ ಆರೋಪಿಯಾಗಿದ್ದ ನಿರ್ದೇಶಕ ನಾಗಶೇಖರ್, 4ನೇ ಆರೋಪಿಯಾಗಿದ್ದ ರವಿವರ್ಮಾ ಇವತ್ತು ಪೊಲೀಸರಿಗೆ ಶರಣಾಗಿದ್ದಾರೆ. ಆದ್ರೆ, 3ನೇ ಆರೋಪಿ ಸಹ ನಿರ್ದೇಶಕ ಸಿದ್ದು, ಹಾಗೂ ಯೂನಿಟ್ ಮ್ಯಾನೇಜರ್ ಭರತ್ ಇನ್ನೂ ತಲೆಮರೆಸಿಕೊಂಡಿದ್ದಾರೆ.