ಮಾಸ್ತಿಗುಡಿ ಶೂಟಿಂಗ್ ವೇಳೆ ಹೆಲಿಕಾಪ್ಟರ್`ನಿಂದ ನೀರಿಗೆ ಜಿಗಿದಿದ್ದ ಇಬ್ಬರೂ ಕಲಾವಿದರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಬೆಂಗಳೂರು(ನ.07): ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡದಲ್ಲಿ ಇಬ್ಬರು ನಟರ ದುರ್ಮರಣ ಸಂಭವಿಸಿದೆ. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಶೂಟಿಂಗ್ ವೇಳೆ ಅನಾಹುತ ನಡೆದಿದ್ದು, ಹೆಲಿಕಾಪ್ಟರ್ನಿಂದ ಹಾರಿ 2 ನಿಮಿಷವಷ್ಟೇ ಈಜಿದ್ದ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ.
ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ 100 ಅಡಿ ಎತ್ತರದಿಂದ ಹೆಲಿಕಾಪ್ಟರ್ನಿಂದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನಾಯಕ ನಟ ದುನಿಯಾ ವಿಜಯ್ ಹಾಗೂ ಸಹ ನಟ ಅನಿಲ್'ನಿಂದಿಗೆ ಉದಯ್ ಹಾರಿದ್ದರು, ದುನಿಯಾ ವಿಜಯ್ ಈಜಿ ದಡ ಸೇರಿದರೆ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ.
ಈ ಕುರಿತು ಅನಿಲ್ ಉದಯ್ ಗುರುಗಳು ಕೃಷ್ಣಮೂರ್ತಿ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದು, ಕೆರೆ ತುಂಬಾ ಆಳ ಇದೆ , ನೀರಿಗೆ ಬಿದ್ದಿರುವುದರಿಂದ ಎಲ್ಲಿದ್ದಾರೆ ಗೊತ್ತಾಗುತ್ತಿಲ್ಲ, ಅವರಿಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಕೃಷ್ಣಮೂರ್ತಿ ಹೇಳಿಕೆ ನೀಡಿದ್ದಾರೆ.
