ಇಲ್ಲಿನ ಖಾನ್ ಮಾರುಕಟ್ಟೆ ಸಮೀಪವಿರುವ ಲೋಕನಾಯಕ್ ಭವನದಲ್ಲಿ  ಭಾರೀ ಅಗ್ನಿ ಅವಗಢ ಸಂಭವಿಸಿದೆ. ಸ್ಥಳಕ್ಕೆ 25 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ನವದೆಹಲಿ (ಜು.24): ಇಲ್ಲಿನ ಖಾನ್ ಮಾರುಕಟ್ಟೆ ಸಮೀಪವಿರುವ ಲೋಕನಾಯಕ್ ಭವನದಲ್ಲಿಭಾರೀ ಅಗ್ನಿ ಅವಗಢ ಸಂಭವಿಸಿದೆ. ಸ್ಥಳಕ್ಕೆ 25 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಕಟ್ಟಡದಿಂದ ದಟ್ಟ ಹೊಗೆ ಬರುತ್ತಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.

ಈ ಕಟ್ಟಡದಲ್ಲಿ ಸರ್ಕಾರಿ ಪ್ರಮುಖ ಕಚೇರಿಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಕಚೇರಿ ಸೇರಿದಂತೆ ಮುಂತಾದ ಪ್ರಮುಖ ಕಛೇರಿಗಳಿವೆ. ಹೆಚ್ಚಿನ ವಿವರಗಳು ಇನ್ನು ಲಭ್ಯವಾಗಬೇಕಿದೆ.