250ಕ್ಕೂ ಹೆಚ್ಚು ಬಿಜೆಪಿ ಮುಖಂಡರಿಂದ ಸಾಮೂಹಿಕ ರಾಜೀನಾಮೆ

First Published 11, Apr 2018, 1:08 PM IST
Mass Resignation from BJP
Highlights

ಮಾಜಿ ಶಾಸಕ ಎಂ.ವೈ ಪಾಟೀಲ್ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ, ಅಫಜಲಪೂರ ತಾಲೂಕಿನ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಕಲಬುರಗಿ : ಮಾಜಿ ಶಾಸಕ ಎಂ.ವೈ ಪಾಟೀಲ್ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ, ಅಫಜಲಪೂರ ತಾಲೂಕಿನ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಎಂ.ವೈ ಪಾಟೀಲ್ ಅವರನ್ನು ನಿರ್ಲಕ್ಷಿಸಿ ಮಾಲೀಕಯ್ಯ ಗುತ್ತೇದಾರ್’ಗೆ ಟಿಕೆಟ್ ನೀಡಿದ್ದನ್ನು ಖಂಡಿಸಿ ಅಫಜಲಪೂರದ ಬಿಜೆಪಿ ಪದಾಧಿಕಾರಿಗಳು, ತಾಪಂ , ಪುರಸಭೆಯ ಬಿಜೆಪಿ ಸದಸ್ಯರುಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಜಮಾದಾರ ಸೇರಿ ತಾಲೂಕು ಪದಾಧಿಕಾರಿಗಳು, ಶಕ್ತಿ ಕೇಂದ್ರದ ಅಧ್ಯಕ್ಷರುಗಳು ಸೇರಿದಂತೆ ಒಟ್ಟು 250 ಕ್ಕೂ ಹೆಚ್ಚು ಬಿಜೆಪಿ ಮುಖಂಡರುಗಳು ತಮ್ಮ ರಾಜೀನಾಮೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡಿರುವ ಬಗ್ಗೆ ಮಾಜಿ ಶಾಸಕ ಎಂ.ವೈ.ಪಾಟೀಲ್ ಸುದ್ದಿಗೋಷ್ಠಿ  ವಿಷಯ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತಿಯ ಐವರು ಸದಸ್ಯರೂ ಸಹ ಬಿಜೆಪಿ ಜೊತೆಗಿದ್ದಾರೆ. ಆದರೆ ತಾಂತ್ರಿಕ ಕಾರಣಗಳಿಂದ ಅವರು ಭಹಿರಂಗವಾಗಿ ಸೇರ್ಪಡೆಯಾಗುತ್ತಿಲ್ಲ.

ಒಟ್ಟಾರೆ ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಆ ಪಕ್ಷದ ತಾಲೂಕು ಪದಾಧಿಕಾರಿಗಳು, ಕಾರ್ಯಕರ್ತರು ಎಂ.ವೈ.ಪಾಟೀಲ್ ಜೊತೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.

loader