ರಾಯಚೂರು [ಆ.15] : ಅನರ್ಹ ಆಗಿರುವ ಎಲ್ಲಾ ಶಾಸಕರ ಫೋನ್ ಕದ್ದಾಲಿಕೆ ಆಗಿವೆ ಎಂದು ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. 

ಕೊಪ್ಪಳದಲ್ಲಿ ಮಾತನಾಡಿದ  ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್,  ಈ ಮೊದಲೇ ನಮ್ಮ ಫೋನ್ ಕದ್ದಾಲಿಕೆ ಆಗುತ್ತಿದೆ ಎನ್ನುವ  ಅನುಮಾನ ಇತ್ತು. ಫೋನ್ ಕದ್ದಾಲಿಕೆ ಮಾಡಿರುವವರಿಗೆ ಶಿಕ್ಷೆ ಆಗಬೇಕು ಎಂದರು. 

ಇನ್ನು ನಾವು ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂದು ನಮ್ಮ ಫೋನ್ ಕದ್ದಾಲಿಕೆ ಆಗಿರಬಹುದು. ಈ ಮೂಲಕವೂ ನಮಗೆ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಪ್ರತಾಪ್ ಗೌಡ ಪಾಟೀಲ್ ಹೇಳಿದರು. 

BSY ಸಂಪುಟ ಸೇರ್ತಾರಾ ಅನರ್ಹ ಶಾಸಕ ?

 ಫೋನ್ ಕದ್ದಾಲಿಕೆ ಪ್ರಕರಣ ಈ ಹಿಂದೆಯೂ ಕೂಡ ರಾಜ್ಯದಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಹಿಂದೆ ಸಿಎಂ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ್ದರು. ಈಗಲೂ ಮತ್ತೆ ಫೋನ್ ಕದ್ದಾಲಿಕೆ ಆಗಿದೆ ಎಂದರು. 

ನನ್ನ ಹಾಗೂ ನನ್ನ ಕಾರ್ಯದರ್ಶಿ ಫೋನ್ ಕದ್ದಾಲಿಕೆ ಆಗಿದ್ದು, ಫೋನ್ ಕದ್ದಾಲಿಕೆಗೆ ಅಂದಿನ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇರ ಹೊಣೆ ಎಂದು ಪ್ರತಾಪಗೌಡ ಆರೋಪಿಸಿದರು. 

ಶಾಸಕರ  ಪೋನ್ ಕದ್ದಾಲಿಕೆ ಆಗಿದೆ  ಎಂದು ಡಿಜಿಪಿ ಅವರೇ ದೂರು ಕೊಟ್ಟಿದ್ದರು. ಹೀಗಾಗಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಅನರ್ಹ ಶಾಸಕರು ಸೇರಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಪ್ರತಾಪಗೌಡ ಹೇಳಿದರು.