ಮಗಳು ದಲಿತ ಯುವಕನನ್ನು ಪ್ರೀತಿಸಿದಳೆಂದು ಪೋಷಕರಿಂದಲೇ ಮರ್ಯಾದಾ ಹತ್ಯೆ

Maryada Hathye in Mysuru
Highlights

ದಲಿತ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಯುವತಿಗೆ ವಿಷ ಹಾಕಿ ಪೋಷಕರು ಮರ್ಯಾದ ಹತ್ಯೆಗೈದಿದ್ದಾರೆ.  ಹತ್ಯೆ ಗುರುತು ಸಿಗದೇ ಮಗಳನ್ನು ಜಮೀನಿನಲ್ಲೇ  ಪೋಷಕರು  ಸುಟ್ಟು ಹಾಕಿದ್ದಾರೆ. 

ಮೈಸೂರು (ಮಾ. 01):  ದಲಿತ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಯುವತಿಗೆ ವಿಷ ಹಾಕಿ ಪೋಷಕರು ಮರ್ಯಾದ ಹತ್ಯೆಗೈದಿದ್ದಾರೆ.  ಹತ್ಯೆ ಗುರುತು ಸಿಗದೇ ಮಗಳನ್ನು ಜಮೀನಿನಲ್ಲೇ  ಪೋಷಕರು  ಸುಟ್ಟು ಹಾಕಿದ್ದಾರೆ. 

ಆಲನಹಳ್ಳಿ ಗ್ರಾಮದ ದಲಿತ ಯುವಕ ಜೊತೆ  ಈ ಯುವತಿಗೆ ಪ್ರೇಮಾಂಕುರವಾಗಿತ್ತು.  ಕೆಲ ದಿನಗಳ ಹಿಂದಷ್ಟೇ  ಉಮೇಶ್, ಸುಮಾ ಜೋಡಿ ಮನೆ ಬಿಟ್ಟು ಓಡಿ ಹೋಗಿದ್ದರು.  ರಾಜಿ ಸಂಧಾನದ ಮೂಲಕ ಜೋಡಿಯನ್ನ ಕುಟುಂಬಸ್ಥರು ಬೇರ್ಪಡಿಸಿದ್ದರು.  ಒಂದು ವರ್ಷದಿಂದ ಯುವತಿ  ಸಂಬಂಧಿಕರ ಮನೆಯಲ್ಲಿದ್ದಳು.  ಆತ ದಲಿತ ಯುವಕ ಎಂಬ ಕಾರಣಕ್ಕೆ  ಪೋಷಕರೇ ಮಗಳಿಗೆ ವಿಷ ಉಣಿಸಿ, ಬಳಿಕ ನೇಣಿಗೆ ಹಾಕಿ ಕ್ರೂರವಾಗಿ ಕೊಂದಿದ್ದಾರೆ. 

ಎಚ್. ಡಿ. ಕೋಟೆ ಪೊಲೀಸರು ಯುವತಿಯ  ತಂದೆಯನ್ನು ಬಂಧಿಸಿದ್ದಾರೆ. 

loader