ಭಾರತೀಯ ವಾಯುಸೇನಾ ಮಾರ್ಷಲ್ ಅರ್ಜನ್ ಸಿಂಗ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರ ಸ್ಥಿತಿ ಬಹಳ ಗಂಭೀರವಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಯುಸೇನಾ ಮುಖ್ಯಸ್ಥ ಬಿಎಸ್ ಧೋನಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ನವದೆಹಲಿ (ಸೆ.16): ಭಾರತೀಯ ವಾಯುಸೇನಾ ಮಾರ್ಷಲ್ ಅರ್ಜನ್ ಸಿಂಗ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರ ಸ್ಥಿತಿ ಬಹಳ ಗಂಭೀರವಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಯುಸೇನಾ ಮುಖ್ಯಸ್ಥ ಬಿಎಸ್ ಧೋನಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮಾರ್ಷಲ್ ಅರ್ಜನ್ ಸಿಂಗ್’ರವರು ಬೇಗ ಗುಣಮುಖರಾಗುವಂತೆ ನಾವೆಲ್ಲಾ ಪ್ರಾರ್ಥಿಸೋಣ. ಡಾಕ್ಟರ್’ಗಳು ಅವರ ಪ್ರಯತ್ನವನ್ನು ಮಾಡುತ್ತಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

1965 ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅರ್ಜನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಐದು ಸ್ಟಾರ್’ಗಳನ್ನು ಪಡೆದ ಮೊದಲ ವಾಯುಸೇನಾ ಅಧಿಕಾರಿ ಇವರು.