ಮಾಜಿ ಶಾಸಕ ಶಿವರಾಮೇಗೌಡರಿಂದ ಮದುವೆ ಮುರಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.  ನೊಂದ ಯುವತಿ  ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.  ಯುವತಿಗೆ ಆದ ಅನ್ಯಾಯದ ಬಗ್ಗೆ ನಾಗಲಕ್ಷ್ಮೀ ಬಾಯಿ ಮಾಹಿತಿ ಪಡೆದಿದ್ದಾರೆ.  

ಬೆಂಗಳೂರು (ಡಿ.05): ಮಾಜಿ ಶಾಸಕ ಶಿವರಾಮೇಗೌಡರಿಂದ ಮದುವೆ ಮುರಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನೊಂದ ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಯುವತಿಗೆ ಆದ ಅನ್ಯಾಯದ ಬಗ್ಗೆ ನಾಗಲಕ್ಷ್ಮೀ ಬಾಯಿ ಮಾಹಿತಿ ಪಡೆದಿದ್ದಾರೆ.

ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಭದ್ರಾವತಿ ಪೊಲೀಸ್ ಇನ್ಸ್‌ಪೆಕ್ಟರ್'ಗೆ ನಾಗಲಕ್ಷ್ಮೀ ಬಾಯಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಫ್ಐಆರ್ ದಾಖಲಿಸಿ ತಿಂಗಳಾದರೂ ಯಾಕೆ ಕ್ರಮಕೈಗೊಂಡಿಲ್ಲ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಎಸ್ಪಿ ಅವರಿಂದಲೂ ಮಾಹಿತಿ ಪಡೆದ ನಾಗಲಕ್ಷ್ಮೀ ಬಾಯಿ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೋಸ ಮಾಡಿದ ಯುವಕ ಹಾಗೂ ಕುಟುಂಬಸ್ಥರಿಗೆ ನೋಟಿಸ್ ನೀಡಲು ಸೂಚನೆ ನೀಡಿದ್ದು ಡಿ.12 ರಂದು ಆಯೋಗದ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಒಂದು ವೇಳೆ ಯುವಕ ಮದುವೆ ಒಪ್ಪದೇ ಇದ್ದಲ್ಲಿ ಕಾನೂನು ಕ್ರಮ ನಿಶ್ಚಿತ ಎಂದಿದ್ದಾರೆ.