ಹಳ್ಳಿಗರ ಎದುರು ಸಿಎಂ ಆಪ್ತನ ದರ್ಪ- ಮನಬಂದಂತೆ ವರ್ತಿಸಿದ ಮರಿಸ್ವಾಮಿ

First Published 10, Mar 2018, 1:10 PM IST
Mariswamy Mis Behave With People
Highlights

ಸಿಎಂ ಆಪ್ತನೋರ್ವ ದುಡ್ಡಿನ ದರ್ಪ ತೋರಿದ ಪ್ರಕರಣವೊಂದು ಬೆಳಕಿದೆ ಬಂದಿದೆ. ಸಿಎಂ ಮನೆಯಲ್ಲಿರುವ ಆಪ್ತ ಮರಿಸ್ವಾಮಿ, ಸಿಎಂ ನೋಡಲು ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಜನರ ಎದುರು ತಮ್ಮ ದರ್ಪ ಪ್ರದರ್ಶನ ಮಾಡಿದ್ದಾರೆ. ತಮ್ಮ ಕಷ್ಟಗಳನ್ನು ಹೇಳಿಕೊಂಡ ಜನರ ಬಳಿ ಮನಬಂದಂತೆ ಮಾತನಾಡಿದ್ದಾರೆ.

ಮೈಸೂರು : ಸಿಎಂ ಆಪ್ತನೋರ್ವ ದುಡ್ಡಿನ ದರ್ಪ ತೋರಿದ ಪ್ರಕರಣವೊಂದು ಬೆಳಕಿದೆ ಬಂದಿದೆ. ಸಿಎಂ ಮನೆಯಲ್ಲಿರುವ ಆಪ್ತ ಮರಿಸ್ವಾಮಿ, ಸಿಎಂ ನೋಡಲು ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಜನರ ಎದುರು ತಮ್ಮ ದರ್ಪ ಪ್ರದರ್ಶನ ಮಾಡಿದ್ದಾರೆ. ತಮ್ಮ ಕಷ್ಟಗಳನ್ನು ಹೇಳಿಕೊಂಡ ಜನರ ಬಳಿ ಮನಬಂದಂತೆ ಮಾತನಾಡಿದ್ದಾರೆ.

ಮರಿಸ್ವಾಮಿ ವರ್ತನೆಗೆ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ರಾಮಕೃಷ್ಣಾ ನಗರದಲ್ಲಿರುವ ಸಿಎಂ ನಿವಾಸದ ಬಳಿಯಲ್ಲಿ ಈ ಘಟನೆ ನಡೆದಿದೆ. ಸಿಎಂ ನಿವಾಸದ ಬಳಿ ತಿಂಡಿ ಮಾಡಬೇಕು ಎಂದ ಜನರ ಬಳಿ, ತಿಂದು ಬರಲು ಆಗುವುದಿಲ್ಲವೇ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

2 ಸಾವಿರ ನೋಟುಗಳನ್ನು ತೋರಿಸುತ್ತಾ ಒಂದೇ ನೋಟು ಕೊಡುವುದು ಎಂದಿದ್ದಾರೆ. ಈ ವೇಳೆ ಹಳ್ಳಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೊಟ್ಟಷ್ಟು ದುಡ್ಡು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿಮ್ಮನ್ನು ಇಲ್ಲಿಗೆ ಬರಲು ಹೇಳಿದ್ದು ಯಾರು, ಇಲ್ಲಿಯವರೆಗೆ ಯಾಕೆ ಬಂದಿರಿ ಎಂದಿದ್ದಾರೆ ಎನ್ನಲಾಗಿದೆ.

loader