Asianet Suvarna News Asianet Suvarna News

ಕೋಟಿ ಕೋಟಿ ಕೊಟ್ಟರೂ ಬಳಸದೇ ಹಾಗೇ ಬಿಟ್ಟರು!

ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳು

1 ಸಾರ್ವಜನಿಕ ಉದ್ದಿಮೆ, ಹಣಕಾಸು, ಕೈಗಾರಿಕೆ ವಾಣಿಜ್ಯ
2 ಆಹಾರ, ನಾಗರಿಕ ಸರಬರಾಜು, ಕ್ರೀಡೆ, ಕನ್ನಡ ಸಂಸ್ಕೃತಿ
3 ಪ್ರವಾಸೋದ್ಯಮ, ಡಿಪಿಎಆರ್‌, ಸಮಾಜ ಕಲ್ಯಾಣ, ಮೂಲಸೌಕರ್ಯ
4 ಇ-ಆಡಳಿತ, ಕಾನೂನು, ಅರಣ್ಯ, ತೋಟಗಾರಿಕೆ, ಕಾರ್ಮಿಕ
5 ಗೃಹ, ಪಶು ಸಂಗೋಪನೆ ಮೀನುಗಾರಿಕೆ, ಅಲ್ಪಸಂಖ್ಯಾತರ ಕಲ್ಯಾಣ
6 ನಗರಾಭಿವೃದ್ಧಿ, ಸಣ್ಣ ನೀರಾವರಿ ಇಲಾಖೆ

Many Departments Fail to Utilize Allotted Money

ಬೆಂಗಳೂರು (ನ.24): ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಗೆ ಇಲಾಖಾವಾರು ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿದ್ದರೂ ನಿಗದಿತ ಗುರಿ ಮುಟ್ಟುವಲ್ಲಿ ಸಮಾಜ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳು ಹಿಂದೆ ಬಿದ್ದಿರುವುದು ಇದೀಗ ಬೆಳಕಿಗೆ ಬಂದಿದೆ.

ಬಿಡುಗಡೆಯಾಗಿರುವ ಹಣವನ್ನು ಖರ್ಚು ಮಾಡುವಲ್ಲಿ ಹಲವು ಇಲಾಖೆಗಳು ಹಿನ್ನಡೆ ಅನುಭವಿಸಿದ್ದರೆ, ಹಣವನ್ನು ಖರ್ಚು ಮಾಡಿರುವ ಕೆಲ ಇಲಾಖೆಗಳು ಅರ್ಧ ವರ್ಷ ಕಳೆದರೂ ಭೌತಿಕ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿವೆ. ಇದರಿಂದಾಗಿ ರಾಜ್ಯ ಸರ್ಕಾರ ಘೋಷಿಸಿದ್ದ ಯೋಜನೆ​ಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸದಿರುವುದು ಬಹಿರಂಗವಾಗಿದೆ.

ಇಲಾಖೆಗಳ ಕಾರ್ಯವೈಖರಿ ಮತ್ತು ಗುರಿ ಮುಟ್ಟುವಲ್ಲಿ ಹಿನ್ನಡೆ ಸಾಧಿಸಿರುವ ಕುರಿತು ಕರ್ನಾಟಕ ಪ್ರಗತಿ ಕಾರ್ಯಕ್ರ​ಮಗಳ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಅಸಮಾ​ಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಕನ್ನಡ ಸಂಸ್ಕೃತಿ ಮೂಲ ಸೌಕರ್ಯ, ಪಶು ಸಂಗೋಪನೆ, ಸಣ್ಣ ನೀರಾವರಿ ಸೇರಿದಂತೆ ಒಟ್ಟು 20 ಇಲಾಖೆಗಳು ಶೇ.50ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿರುವುದು ವರದಿ​ಯಿಂದ ಗೊತ್ತಾಗಿದೆ. ವಸತಿ ಮತ್ತು ಸಹ​ಕಾರ ಇಲಾಖೆ ಶೇ.90ಕ್ಕಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿದ್ದರೆ, ಪ್ರಾಥಮಿಕ, ಪ್ರೌಢ​ಶಿಕ್ಷಣ, ಕಂದಾಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಶೇ.75ರಿಂದ 90ರಷ್ಟುಪ್ರಗತಿ ಸಾಧಿಸಿದೆ.ಅದೇ ರೀತಿ, ಸಾರಿಗೆ, ಉನ್ನತ ಶಿಕ್ಷಣ, ಹಿಂದುಳಿದ ವರ್ಗಗಳ ಇಲಾಖೆ, ಕೃಷಿ, ಲೋಕೋಪಯೋಗಿ, ಆರೋಗ್ಯ, ಕುಟುಂಬ ಕಲ್ಯಾಣ, ಮಹಿಳೆ, ಮಕ್ಕಳ ಅಭಿವೃದ್ಧಿ, ಯೋಜನೆ ಮತ್ತು ಜಲಸಂಪನ್ಮೂಲ ಇಲಾಖೆ ಶೇ. 50ರಿಂದ 75ರಷ್ಟುಪ್ರಗತಿ ಸಾಧಿಸಿರುವುದು ವರದಿಯಿಂದ ಗೊತ್ತಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ ಪ್ರಿ ಮೆಟ್ರಿಕ್‌ ವಿದ್ಯಾರ್ಥಿ ವೇತನ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ವಿತರಿಸಲು ಹಂಚಿಕೆಯಾಗಿದ್ದ ರೂ.364.59 ಕೋಟಿಯಲ್ಲಿ ರೂ.251.12 ಕೋಟಿ ಬಿಡು​ಗಡೆ ಆಗಿದೆ.
ಇದರಲ್ಲಿ ಕೇವಲ ಶೇ.16ರಷ್ಟುಪ್ರಗತಿ ಆಗಿದೆ. ಅಲ್ಲದೆ, 9,84,000 ವಿದ್ಯಾ​ಥಿ​ರ್‍ಗಳಿಗೆ ವಿದ್ಯಾರ್ಥಿ ವೇತನ ವಿತರಿಸಬೇ​ಕಿದ್ದ ಇಲಾಖೆ, 98,233 ವಿದ್ಯಾರ್ಥಿ​ಗಳಿ​ಗಷ್ಟೇ ವಿದ್ಯಾರ್ಥಿ ವೇತನ ವಿತ​ರಿ​ಸಿ​ರು​ವುದು ವರದಿಯಿಂದ ಗೊತ್ತಾಗಿದೆ.

Follow Us:
Download App:
  • android
  • ios