ನೋಟು ನಿಷೇಧದಿಂದ ಮದುವೆ ಸಮಾರಂಭಗಳಿಗೆ ತೊಂದರೆಯಾಗುತ್ತಿದ್ದು  “ಬಿಜೆಪಿಯಲ್ಲಿರುವ ಬಹುತೇಕ ಮಂದಿ ಬ್ರಹ್ಮಚಾರಿಗಳು. ಇದು ಮದುವೆ ಸೀಸನ್ ಎನ್ನುವುದು ಅವರಿಗೆ ಗೊತ್ತಿಲ್ಲವೆಂದು” ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಾಸ್ಯ ಮಾಡಿದ್ದಾರೆ.

ನವದೆಹಲಿ (ನ.18): ಯಾವಾಗಲೂ ರಾಜಕಾರಣಿಗಳನ್ನು ತಮಾಷೆಯಾಗಿ ಕಾಲೆಳೆಯುವ ಬಾಬಾ ರಾಮ್ ದೇವ್ ನೋಟು ನಿಷೇಧದ ಬಗ್ಗೆ ಬಿಜೆಪಿ ಸದಸ್ಯರಿಗೆ ಕಾಲೆಳೆದಿದ್ದಾರೆ.

ನೋಟು ನಿಷೇಧದಿಂದ ಮದುವೆ ಸಮಾರಂಭಗಳಿಗೆ ತೊಂದರೆಯಾಗುತ್ತಿದ್ದು “ಬಿಜೆಪಿಯಲ್ಲಿರುವ ಬಹುತೇಕ ಮಂದಿ ಬ್ರಹ್ಮಚಾರಿಗಳು. ಇದು ಮದುವೆ ಸೀಸನ್ ಎನ್ನುವುದು ಅವರಿಗೆ ಗೊತ್ತಿಲ್ಲವೆಂದು” ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಾಸ್ಯ ಮಾಡಿದ್ದಾರೆ.

ಈ ನಿರ್ಧಾರವನ್ನು ಇನ್ನೊಂದು ಹದಿನೈದು ದಿನ ಅಥವಾ ಒಂದು ತಿಂಗಳ ನಂತರ ತೆಗೆದುಕೊಂಡಿದ್ದರೆ ಮದುವೆ ಸಮಾರಂಭಗಳ ಮೇಲೆ ಪರಿಣಾಮ ಬೀರುತ್ತಿರಲಿಲ್ಲ ಎಂದಿದ್ದಾರೆ.

ಹಣದ ಅಪಮೌಲ್ಯೀಕರಣದಿಂದ ಆಗಿರುವ ಒಳ್ಳೆಯ ವಿಚಾರವೆಂದರೆ ಇದು ವರದಕ್ಷಿಣೆ ಪಿಡುಗನ್ನು ನಿಲ್ಲಿಸುತ್ತದೆ. ಜನರು ವರದಕ್ಷಿಣೆ ತರುವುದಕ್ಕಾಗಿ ಹಿಂಸೆ ಮಾಡಲಾಗುವುದಿಲ್ಲ ಎಂದಿದ್ದಾರೆ.