ನ್ಯಾ ಆರ್. ಭಾನು ಮತ್ತು ನ್ಯಾ ಎಂ.ಎಂ. ಶಾಂತನಗೌಡರ್ ಅವರಿದ್ದ ಪೀಠ, ತಿಂಗಳಿಗೆ 95,527 ರು. ವೇತನ ಪಡೆಯುತ್ತಿದ್ದ ಪಶ್ಚಿಮ ಬಂಗಾಳದ ಹೂಗ್ಲಿ ನಿವಾಸಿಯೊಬ್ಬನಿಗೆ ಆತನ ಮಾಜಿ ಪತ್ನಿಗೆ 20,000 ರು. ಜೀವನಾಂಶ ನೀಡುವಂತೆ ಸೂಚಿಸಿದೆ.

ನವದೆಹಲಿ(ಏ.21): ಪತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ಸಂಬಳದ ಶೇ.25ರಷ್ಟು ಜೀವನಾಂಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಮಾನದಂಡ ನಿಗದಿಪಡಿಸಿದೆ. ವಿಚ್ಛೇದನ ಪಡೆದ ಮಹಿಳೆ ಗಂಡನಿಂದ ಬೇರೆಯಾದ ಬಳಿಕ ಗೌರವಯುತವಾಗಿ ಜೀವನ ನಡೆಸಲು ಜೀವನಾಂಶ ನ್ಯಾಯಸಮ್ಮತ ಮತ್ತು ಸಮರ್ಪಕವಾಗಿರಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ನ್ಯಾ ಆರ್. ಭಾನು ಮತ್ತು ನ್ಯಾ ಎಂ.ಎಂ. ಶಾಂತನಗೌಡರ್ ಅವರಿದ್ದ ಪೀಠ, ತಿಂಗಳಿಗೆ 95,527 ರು. ವೇತನ ಪಡೆಯುತ್ತಿದ್ದ ಪಶ್ಚಿಮ ಬಂಗಾಳದ ಹೂಗ್ಲಿ ನಿವಾಸಿಯೊಬ್ಬನಿಗೆ ಆತನ ಮಾಜಿ ಪತ್ನಿಗೆ 20,000 ರು. ಜೀವನಾಂಶ ನೀಡುವಂತೆ ಸೂಚಿಸಿದೆ.

ಈ ಹಿಂದೆ ಕಲ್ಕತ್ತಾ ಹೈಕೋರ್ಟ್ ಇದೇ ವ್ಯಕ್ತಿಗೆ ತಿಂಗಳಿಗೆ 23,000 ಜೀವನಾಂಶ ನೀಡುವಂತೆ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಆತ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ವೇಳೆ, ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಯಾವ ದೋಷವೂ ಇಲ್ಲ. ಆದರೆ, ಅರ್ಜಿದಾರ ಇನ್ನೊಂದು ಮದುವೆಯಾಗಿದ್ದು, ಎರಡನೇ ಪತ್ನಿಯಿಂದ ಮಗುವನ್ನೂ ಪಡೆದಿದ್ದಾನೆ. ಹೀಗಾಗಿ ಆತನ ಕೌಟುಂಬಿಕ ನಿರ್ವಹಣೆಯ ದೃಷ್ಟಿಯಿಂದ ಜೀವನಾಂಶವನ್ನು 23,000 ರು.ನಿಂದ 20,000ಕ್ಕೆ ಇಳಿಸಿದ್ದಾಗಿ ತಿಳಿಸಿದೆ.