ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಸಿಎಂ ಮನೋಹರ್ ಪರ್ರಿಕರ್ ಕೆಲವೇ ವಾರಗಳಲ್ಲಿ ವಾಪಾಸು ಬರುವುದಾಗಿ ಕಾರ್ಯಕರ್ತರಿಗೆ ಸಂದೇಶ
ನವದೆಹಲಿ [ಮೇ.13]: ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಭಾನುವಾರ ಬಿಜೆಪಿ ಕಾರ್ಯಕರ್ತರಿಗೆ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.
ಗೋವಾದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತೋರಿಸಲಾದ ವಿಡಿಯೋನಲ್ಲಿ ಪರ್ರಿಕರ್, ತಾನು ಕೆಲವೇ ವಾರಗಳಲ್ಲಿ ಹಿಂತಿರುವುದಾಗಿ ಹೇಳಿದ್ದಾರೆ.
ಗೋವಾಕ್ಕೆ ಹೊಸ ಸಿಎಂಅನ್ನು ನೇಮಕ ಮಾಡಿ ಅಥವಾ ವಾಮಮಾರ್ಗದ ಮೂಲಕ ರಚಿಸಿರುವ ಸರ್ಕಾರವನ್ನು ವಿಸರ್ಜಿಸಿ ಎಂದು ಶನಿವಾರ ಗೋವಾ ಕಾಂಗ್ರೆಸ್ ಆಗ್ರಹಿಸಿತ್ತು.
ಕಳೆದ 2 ತಿಂಗಳಿನಿಂದ ಗೋವಾದಲ್ಲಿ ನೇತೃತ್ವವಿಲ್ಲದ ಸರ್ಕಾರವಿದೆ. ಆಡಳಿತ ಯಂತ್ರವು ನಿಷ್ಕ್ರಿಯವಾಗಿದೆ. ಗೋವಾಗೆ ಪೂರ್ಣಾವಧಿ ಸಿಎಂನ ಅಗತ್ಯವಿದೆ, ಎಂದು ಕಾಂಗ್ರೆಸ್ ಹೇಳಿದೆ.
62 ವರ್ಷ ಪ್ರಾಯದ ಪರ್ರಿಕರ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್ ಮೊದಲ ವಾರದಲ್ಲಿ ಅಮೆರಿಕಾದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆ ಬಳಿಕ ಸಂಪುಟ ಸಚಿವರನ್ನೊಳಗೊಂಡ ತ್ರಿಸದಸ್ಯ ಸಲಹಾ ಸಮಿತಿಯು ಸರ್ಕಾರದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ.
