Asianet Suvarna News Asianet Suvarna News

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಾಜೀನಾಮೆ

ಮೂರು ಪಕ್ಷಗಳ ಶಾಸಕರು ರಾಜ್ಯಪಾಲ ಮೃದುಲಾ ಷಾ ಅವರನ್ನು ಭೇಟಿ ಮಾಡಿ ಮನೋಹರ್ ಪರಿಕ್ಕರ್ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೂ ಪತ್ರ ಬರೆದಿದ್ದಾರೆ.

Manohar Parrikar resigned

ಪಣಜಿ(ಮಾ.12): ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಕಾರಣದಿಂದ ಕೇಂದ್ರ ರಕ್ಷಣ ಸಚಿವ ಮನೋಹರ್ ಪರಿಕ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

40 ಸದಸ್ಯರುಳ್ಳ  ಗೋವಾ ವಿಧಾನಸಭಾ ಕ್ಷೇತ್ರದಲ್ಲಿ  ಬಿಜೆಪಿ 13 ಸ್ಥಾನಗಳಿಸಿದರೆ, ಕಾಂಗ್ರೆಸ್ 17 ಸ್ಥಾನ ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.  ಪರಿಕ್ಕರ್ ಮುಖ್ಯಮಂತ್ರಿ ಆಗುವುದಾದರೆ  ತಲಾ ಮೂರು ಸ್ಥಾನ ಗೆದ್ದಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಮತ್ತು ಗೋವಾ ವಿಕಾಸ್‌  ಪಕ್ಷ,  ಓರ್ವ ಪಕ್ಷೇತರ ಶಾಸಕ ಕೂಡ ಬೆಂಬಲ ನೀಡುವುದಾಗಿ ಘೋಷಿಸಿದ್ದವು. ಅಲ್ಲದೆ ಕಾಂಗ್ರೆಸ್ ಬಂಡಾಯ ಶಾಸಕರು ಕೂಡ ಬೆಂಬಲಿಸುವುದಾಗಿ ತಿಳಿಸಿದ್ದರು.

ಮೂರು ಪಕ್ಷಗಳ ಶಾಸಕರು ರಾಜ್ಯಪಾಲ ಮೃದುಲಾ ಷಾ ಅವರನ್ನು ಭೇಟಿ ಮಾಡಿ ಮನೋಹರ್ ಪರಿಕ್ಕರ್ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೂ ಪತ್ರ ಬರೆದಿದ್ದಾರೆ. ಇವರೆಲ್ಲರ ಬೆಂಬಲದಿಂದ ಬಿಜೆಪಿಯ ಬಲ 21ಕ್ಕೆ ಏರಲಿದೆ. ಚುನಾವಣಾ ಫಲಿತಾಂಶದಲ್ಲಿ ಹಾಲಿ ಮುಖ್ಯಮಂತ್ರಿ ಲಕ್ಷ್ಮಿ'ಕಾಂತ್ ಪಾರ್ಸೆಕರ್ ಸ್ವತಃ ಸೋಲನ್ನು ಅನುಭವಿಸಿದ್ದರು.

Follow Us:
Download App:
  • android
  • ios