164 ಮೀಟರ್ ಉದ್ದ ಮತ್ತು 7,500 ಟನ್ ತೂಕ ಹೊಂದಿರುವ ‘ಐಎನ್‌ಎಸ್ ಚೆನ್ನೈ’ ಭಾರತದ ನೌಕಾ ಸೇನೆಯಲ್ಲಿರುವ ಬೃಹತ್ ಯುದ್ಧನೌಕೆಗಳಲ್ಲಿ ಒಂದಾಗಿದೆ.

ಮುಂಬೈ(ನ.21): ಭಾರತೀಯ ವಿನ್ಯಾಸದ ಕ್ಷಿಪಣಿ ನಾಶಕ ನಿರ್ದೇಶಿತ ಮೂರನೇ ಯುದ್ಧ ನೌಕೆ ‘ಐಎನ್‌ಎಸ್ ಚೆನ್ನೈ’ಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿದ್ದಾರೆ. ಮುಂಬೈಯ ಮಜಗಾನ್ ಡಾಕ್ ಶಿಪ್‌'ಬಿಲ್ಡರ್ಸ್ ಲಿಮಿಟೆಡ್ ಕಂಪನಿಯಿಂದ ನಿರ್ಮಿಸಲ್ಪಟ್ಟಿರುವ, ಈ ಹಡಗನ್ನು ಕೋಲ್ಕತಾ ದರ್ಜೆಯ ಕ್ಷಿಪಣಿ ನಾಶಕ ತಂತ್ರಜ್ಞಾನದಿಂದ ರಚಿಸಲಾಗಿದೆ.

ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಕೂಡ ಈ ಸಂದರ್ಭ ಉಪಸ್ಥಿತರಿದ್ದರು. 164 ಮೀಟರ್ ಉದ್ದ ಮತ್ತು 7,500 ಟನ್ ತೂಕ ಹೊಂದಿರುವ ‘ಐಎನ್‌ಎಸ್ ಚೆನ್ನೈ’ ಭಾರತದ ನೌಕಾ ಸೇನೆಯಲ್ಲಿರುವ ಬೃಹತ್ ಯುದ್ಧನೌಕೆಗಳಲ್ಲಿ ಒಂದಾಗಿದೆ. ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಮತ್ತಿತರ ಆಧುನಿಕ ತಂತ್ರಜ್ಞಾನ ಈ ನೌಕೆಯಲ್ಲಿದೆ.