ಮುನೀಶ್ ಸಿಸೋದಿಯಾ ಅವರ ಪಾತ್ಪಾರ್’ಗಂಜ್’ನಲ್ಲಿರುವ ಕಚೇರಿಯಲ್ಲಿ ಗುರುವಾರ ತಡರಾತ್ರಿ ಕಳ್ಳತನ ನಡೆದಿದೆ. ಫಾರೆನ್ಸಿಕ್ ತಜ್ಞರು ಬೆರಳಚ್ಚು ಹಾಗೂ ಇತರ ಮಾಹಿತಿಗಳನ್ನು ಸ್ಥಳದಿಂದ ಸಂಗ್ರಹಿಸಿದ್ದಾರೆ, ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನವದೆಹಲಿ (ಡಿ.30): ದೆಹಲಿ ಉಪ-ಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಕಚೇರಿಗೆ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿರುವ ಘಟನೆ ನಡೆದಿದೆ.
ಕಳ್ಳರು ಸಿಸೋದಿಯಾ ಅವರ ಕಚೇರಿಯಲ್ಲಿದ್ದ ಕಂಪ್ಯೂಟರ್ ಹಾಗೂ ಕಡತಗಳನ್ನು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿದೆ.
ಮುನೀಶ್ ಸಿಸೋದಿಯಾ ಅವರ ಪಾತ್ಪಾರ್’ಗಂಜ್’ನಲ್ಲಿರುವ ಕಚೇರಿಯಲ್ಲಿ ಗುರುವಾರ ತಡರಾತ್ರಿ ಕಳ್ಳತನ ನಡೆದಿದೆ. ಫಾರೆನ್ಸಿಕ್ ತಜ್ಞರು ಬೆರಳಚ್ಚು ಹಾಗೂ ಇತರ ಮಾಹಿತಿಗಳನ್ನು ಸ್ಥಳದಿಂದ ಸಂಗ್ರಹಿಸಿದ್ದಾರೆ, ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೆಲವು ಕಡತಗಳು ಹಾಗೂ 2 ಕಂಪ್ಯೂಟರ್’ಗಳು ಕಳವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳ್ಳರು ಮೊದಲು ಸಿಸಿಟಿವಿ ಕ್ಯಾಮೆರಾಗಳನ್ನು ಬೇರೆಕಡೆ ಸ್ಥಳಾಂತರ ಮಾಡಿದ ಬಳಿಕ ಕಳ್ಳತನ ಮಾಡಿದ್ದಾರೆ.