ನರೇಂದ್ರ ಮೋದಿ ಗುಜರಾತ್ ಸಮಾವೇಶದಲ್ಲಿ ಮೋದಿ, "ದೇಶಕಟ್ಟುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪಾತ್ರ ಮಹತ್ವದ್ದಾಗಿದೆ. ಆದರೆ ಅವರನ್ನು ತುಳಿಯುವ ಪ್ರಯತ್ನ ನಡೆದಿತ್ತಾದರೂ ಅದು ಯಶಸ್ವಿಯಾಗಲಿಲ್ಲ ಎಂದು ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ ಹೆಸರು ಪ್ರಸ್ತಾಪಿಸದೇ ಟೀಕೆ ಮಾಡಿದ್ದರು.

ನವದೆಹಲಿ(ಡಿ.07): ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಎಂದು ಜರಿದಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ

2014ರ ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿಯನ್ನು 'ಚಾಯ್'ವಾಲಾ' ಎಂದುಕರೆಯುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದ ಅಯ್ಯರ್, ಇದೀಗ ಪ್ರಧಾನಿ ನರೇಂದ್ರಮೋದಿಯನ್ನು ಸಂಸ್ಕೃತಿಯಿಲ್ಲದ ಹೀನ ರಾಜಕಾರಣಿ ಎಂದು ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿ ಗುಜರಾತ್ ಸಮಾವೇಶದಲ್ಲಿ ಮೋದಿ, "ದೇಶಕಟ್ಟುವಲ್ಲಿ ಬಾಬಾ ಸಾಹೇಬ್ಅಂಬೇಡ್ಕರ್ ಪಾತ್ರ ಮಹತ್ವದ್ದಾಗಿದೆ. ಆದರೆ ಅವರನ್ನು ತುಳಿಯುವ ಪ್ರಯತ್ನ ನಡೆದಿತ್ತಾದರೂಅದು ಯಶಸ್ವಿಯಾಗಲಿಲ್ಲ ಎಂದು ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ ಹೆಸರುಪ್ರಸ್ತಾಪಿಸದೇ ಟೀಕೆ ಮಾಡಿದ್ದರು.

ಪ್ರಧಾನಿ ಮಾತಿಗೆ ಪ್ರತಿಕ್ರಿಯಿಸಿರುವ ಅಯ್ಯರ್, ಅಂಬೇಡ್ಕರ್ ಆಶಯ ನನಸಾಗಿಸುವಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.