ಏರ್ ಇಂಡಿಯಾ ವಿಮಾನದ ಅವ್ಯವಸ್ಥೆ ವಿರುದ್ದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮಂಗಳೂರು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ದುಬೈನಿಂದ ನಿನ್ನೆ ರಾತ್ರಿ ಹೊರಟಿದ್ದ ಏರ್ ಇಂಡಿಯಾ ವಿಮಾನ ಇಂದು ಬೆಳಿಗ್ಗೆ 4.45ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಏರ್ ಇಂಡಿಯಾ ವಿಮಾನ ಹವಾಮಾನ ವೈಫರಿತ್ಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಲ್ಯಾಂಡ್ ಆಗಲಿಲ್ಲ.
ಮಂಗಳೂರು (ಜೂ. 15): ಏರ್ ಇಂಡಿಯಾ ವಿಮಾನದ ಅವ್ಯವಸ್ಥೆ ವಿರುದ್ದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮಂಗಳೂರು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ.
ದುಬೈನಿಂದ ನಿನ್ನೆ ರಾತ್ರಿ ಹೊರಟಿದ್ದ ಏರ್ ಇಂಡಿಯಾ ವಿಮಾನ ಇಂದು ಬೆಳಿಗ್ಗೆ 4.45ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಏರ್ ಇಂಡಿಯಾ ವಿಮಾನ ಹವಾಮಾನ ವೈಫರಿತ್ಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಲ್ಯಾಂಡ್ ಆಗಲಿಲ್ಲ. ಮಂಗಳೂರಿನಿಂದ ವಾಪಾಸ್ ಕೊಚ್ಚಿಗೆ ಹೋಗಿ ಅಲ್ಲಿನ ಏರ್ ಪೋರ್ಟ್’ನಲ್ಲಿ ಲ್ಯಾಂಡ್ ಆಗಿದೆ.
ಬಳಿಕ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಪ್ರಯಾಣಿಕರು ಕಾಯಬೇಕಾಯಿತು. ಅಂತೂ ಇಂತೂ ಮಧ್ಯಾಹ್ನ 12.45ಕ್ಕೆ ಮಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ಆಯಿತು. 6 ಗಂಟೆಗೂ ಹೆಚ್ಚು ಕಾಲ ಕಾಯಿಸಿದ್ದಕ್ಕೆ ರನ್ ವೇನಲ್ಲೇ ಪ್ರಯಾಣಿಕರು ಪ್ರತಿಭಟಿಸಿದ್ದಾರೆ.
