ವಿಚಾರವಾದಿ ನರೇಂದ್ರ ನಾಯಕ್ ಫ್ಲಾಟ್'ಗೆ ಅಪರಿಚಿತ ಎಂಟ್ರಿ

news | Thursday, June 14th, 2018
Suvarna Web Desk
Highlights
  • ಮಂಗಳೂರಿನ ಲೇಡಿಹಿಲ್ ಬಳಿಯ ಫ್ಲಾಟ್'ನಲ್ಲಿ ಕಾಣಿಸಿಕೊಂಡ ಅಪರಿಚಿತ
  • ಕಳೆದ ವರ್ಷ ಹತ್ಯೆ ಕೂಡ ಯತ್ನ ಪ್ರಯತ್ನ ನಡೆದಿತ್ತು

ಮಂಗಳೂರು[ಜೂ.14]: ವಿಚಾರವಾದಿ ನರೇಂದ್ರ ನಾಯಕ್ ಇರುವ ಫ್ಲಾಟ್'ಗೆ ಅಪರಿಚಿತನೊಬ್ಬ ಭೇಟಿ ನೀಡಿರುವುದು ಘಟನೆ ಮಂಗಳೂರಿನ ಲೇಡಿಹಿಲ್ ಬಳಿ ನಡೆದಿದೆ.
ಫ್ಲಾಟ್'ನ ಭದ್ರತಾ ಸಿಬ್ಬಂದಿ ಆಗುಂತುಕನನ್ನು ಪ್ರಶ್ನಿಸಿದಾಗ ನರೇಂದ್ರ ನಾಯಕ್ ಬಗ್ಗೆ ವಿಚಾರಿಸಿದ್ದಾನೆ.

ಅಪರಿಚಿತ ಓಡಾಡಿರುವುದು ಹತ್ಯೆಗೆ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷವೂ ಕೂಡ ನರೇಂದ್ರ ನಾಯಕ್ ಹತ್ಯೆ ಪ್ರಯತ್ನ ನಡೆದಿತ್ತು. ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಇಬ್ಬರು ಬೈಕನ್ನು ಹಿಂಬಾಲಿಸಿ ಟೈರ್ ಪಂಕ್ಚರ್ ಆಗಿದೆ ಎಂದು ಕಾರು ನಿಲ್ಲಿಸಲು ಪ್ರಯತ್ನಿಸಿದ್ದರು. ಅಪಾಯದ ಮುನ್ಸೂಚನೆ ಅರಿತ ನಾಯಕರು ಕಾರನ್ನು ನಿಲ್ಲಿಸದೆ ಪ್ರಯಾಣಿಸಿದ್ದರು.  ನಂತರ ಪೊಲೀಸರಿಗೆ ದೂರು ನೀಡಿದ್ದರು. 

2017ರ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಶೂಟರ್ ಪರಶುರಾಮ್ ವಾಗ್ಮೋರೆ ಎಂಬಾತನನ್ನು 2 ದಿನಗಳ ಹಿಂದಷ್ಟೆ ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Comments 0
Add Comment