ಮಂಗಳೂರಲ್ಲಿ ನಡೆದ ಹತ್ಯೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರು ಸರ್ವನಾಶವಾಗಬೇಕೆಂದು ರಮಾನಾಥ್ ರೈ ಗುಡುಗಿದ್ದಾರೆ.
ಬೆಂಗಳೂರು (ಸೆ.04): ಮಂಗಳೂರಲ್ಲಿ ನಡೆದ ಹತ್ಯೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರು ಸರ್ವನಾಶವಾಗಬೇಕೆಂದು ರಮಾನಾಥ್ ರೈ ಗುಡುಗಿದ್ದಾರೆ.
ಬಿಜೆಪಿಯವರು ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದ್ದಾರೆ. ನಮ್ಮ ಜಿಲ್ಲೆ ಬಿಜೆಪಿ ಮುಖಂಡರಿಗೆ ನಾಗ್ಪುರ ಇದ್ದಂತೆ ಎಂದ ಅವರು, ಬಿಜೆಪಿಯವರ ನಾಟಕ, ಉದ್ದೇಶಗಳು ನಡೆಯಲ್ಲ ಅಂತಾ ರೈ ಹೇಳಿದ್ದಾರೆ. ಬಿಜೆಪಿ ಮತ್ತೇ ಬೈಕ್ ರ್ಯಾಲಿ ಮೂಲಕ ಜಲ್ಲೆಯಲ್ಲಿಯ ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಮುಸ್ಲಿಂ ಅಂತಾ ತಿಳಿದು ಅದೆಷ್ಟೋ ಹಿಂದೂಗಳ ಹತ್ಯೆ ನಡೆದಿವೆ. ಅದೆಲ್ಲವೂ ನಿಯೋಜಿತ ಹತ್ಯೆಗಳೇ ಆಗಿವೆ ಎಂದಿದ್ದಾರೆ. ಬಿಜೆಪಿಯ ಬೈಕ್ ರ್ಯಾಲಿ ಕಾನೂನು ಸುವ್ಯವಸ್ಥೆಗೆ ಮತ್ತು ಸಾಮರಸ್ಯ ಕದುಡುವ ಪ್ರಯತ್ನವಾಗಿದೆ ಎಂದಿದ್ದಾರೆ. ಇದೇ 12 ರಂದು ಪಿರಂಗಿ ಪೇಟೆಯಿಂದ ಮಾನಿವರೆಗೆ ಸಾಮರಸ್ಯ ಯಾತ್ರೆ ನಡೆಸುವುದಾಗಿ ರಮಾನಾಥ್ ರೈ ಹೇಳಿದ್ದಾರೆ.
