ಕರಾವಳಿಯಲ್ಲಿ ಮೀನು ಮಾರುಕಟ್ಟೆ ಬಹು ದೊಡ್ಡ ಆರ್ಥಿಕ ಕೇಂದ್ರ ಬಿಂದು. ಮಲ್ಪೆ ಹಾಗೂ ಮಂಗಳೂರಿನಲ್ಲಿ ಪ್ರತಿದಿನ 100 ಕೋಟಿಗೂ ಹೆಚ್ಚು ಮೌಲ್ಯದ ವಹಿವಾಟು ನಡೆಯುದ್ದು ಈಗ ದಿಢೀರ್ ಅಂತ 1 ಲಕ್ಷಕ್ಕೆ ಇಳಿದಿದೆ, ಇದರಲ್ಲಿ ಶೇಕಡಾ 80 ರಷ್ಟು ಪ್ರಮಾಣ ಬರೀ ಮೀನಿನ ವಹಿವಾಟೇ. ಆದರೆ ನೋಟ್ ಬ್ಯಾನ್ ಆಗಿದ್ದರಿಂದ ಮೀನಿನ ವ್ಯಾಪಾರಕ್ಕೆ ಸ್ಟ್ರೋಕ್ ಬಡಿದಂತಾಗಿದೆ.
ಮಂಗಳೂರು(ನ.19): 500 ಹಾಗೂ 1000 ಮುಖಬೆಲೆಯ ನೋಟ್ ರದ್ದತಿಯು ಎಲ್ಲ ರಂಗದ ಮೇಲೂ ತನ್ನ ಪ್ರಭಾವ ಬೀರಿದೆ. ಕರಾವಳಿ ಮೀನು ಮಾರುಕಟ್ಟೆಯ ಮೇಲೆಯೂ ನೋಟಿನ ರದ್ದತಿ ಬಿಸಿ ತಟ್ಟಿದೆ.
ಕರಾವಳಿಯಲ್ಲಿ ಮೀನು ಮಾರುಕಟ್ಟೆ ಬಹು ದೊಡ್ಡ ಆರ್ಥಿಕ ಕೇಂದ್ರ ಬಿಂದು. ಮಲ್ಪೆ ಹಾಗೂ ಮಂಗಳೂರಿನಲ್ಲಿ ಪ್ರತಿದಿನ 100 ಕೋಟಿಗೂ ಹೆಚ್ಚು ಮೌಲ್ಯದ ವಹಿವಾಟು ನಡೆಯುದ್ದು ಈಗ ದಿಢೀರ್ ಅಂತ 1 ಲಕ್ಷಕ್ಕೆ ಇಳಿದಿದೆ, ಇದರಲ್ಲಿ ಶೇಕಡಾ 80 ರಷ್ಟು ಪ್ರಮಾಣ ಬರೀ ಮೀನಿನ ವಹಿವಾಟೇ. ಆದರೆ ನೋಟ್ ಬ್ಯಾನ್ ಆಗಿದ್ದರಿಂದ ಮೀನಿನ ವ್ಯಾಪಾರಕ್ಕೆ ಸ್ಟ್ರೋಕ್ ಬಡಿದಂತಾಗಿದೆ.
1,000, 2,000 ರೂ. ಚಿಲ್ಲರೆ ಇಲ್ಲದೇ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಈಗಲೂ 500, 1000 ಹಳೆಯ ನೋಟುಗಳನ್ನು ಅನಿವಾರ್ಯವಾಗಿ ಮೀನಿನ ವ್ಯಾಪಾರಿಗಳು ಪಡೆಯುವಂಥ ಸ್ಥಿತಿ ನಿರ್ಮಾಣವಾಗಿದ್ದು ವ್ಯಾಪಾರ ಗಂಭೀರ ಮಟ್ಟದಲ್ಲಿ ಇಳಿಮುಖವಾಗಿದ್ದು ವ್ಯಾಪಾರಿಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.