ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ‘ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲು ಯಾವುದೇ ಕಾಲಮಿತಿ ಇರಬಾರದು. ಘಟನೆ ನಡೆದು 10-15 ವರ್ಷವಾದರೂ ದೂರು ದಾಖಲಿಸಲು ಅವಕಾಶ ಇರಬೇಕು’ ಎಂದು ಹೇಳಿದ್ದಾರೆ. 

ನವದೆಹಲಿ: ಈಗ ಆರಂಭವಾಗಿರುವ ‘ಮೀ ಟೂ’ (ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ) ಎಂಬ ಆನ್‌ಲೈನ್‌ ಆಂದೋಲನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ‘ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲು ಯಾವುದೇ ಕಾಲಮಿತಿ ಇರಬಾರದು. 

ಘಟನೆ ನಡೆದು 10-15 ವರ್ಷವಾದರೂ ದೂರು ದಾಖಲಿಸಲು ಅವಕಾಶ ಇರಬೇಕು’ ಎಂದು ಹೇಳಿದ್ದಾರೆ. ಈ ಬಗ್ಗೆ ಕಾನೂನು ತಿದ್ದುಪಡಿ ಮಾಡಬೇಕು ಎಂದು ಕೇಂದ್ರ ಕಾನೂನು ಸಚಿವಾಲಯಕ್ಕೆ ತಾವು ಕೋರಿದ್ದಾಗಿಯೂ ತಿಳಿಸಿದ್ದಾರೆ. ಸಿಆರ್‌ಪಿಸಿಯ 473ನೇ ಪರಿಚ್ಛೇದದ ಪ್ರಕಾರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಯಾವುದೇ ಅಪರಾಧದ ಬಗ್ಗೆ ಘಟನೆ ನಡೆದ 3 ವರ್ಷದೊಳಗೆ ದೂರು ನೀಡಬೇಕು. 

3 ವರ್ಷದೊಳಗೆ ದೂರು ನೀಡಿದರೆ ಮಾತ್ರ ಆರೋಪಿಗಳಿಗೆ ಜೈಲು ಸಜೆಯಾಗುತ್ತದೆ. ಹೀಗಾಗಿ ಈ ಕಾಲಮಿತಿ ಸಡಿಲಿಸುವ ಕ್ರಮ ಜರುಗಿಸಬೇಕೆಂದು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ’ ಎಂದು ಮನೇಕಾ ಹೇಳಿದರು.