ಸಿನಿಮಾ ನಟರಾಗಬೇಕಾ? ತರಬೇತಿ ಬೇಕಿಲ್ಲ, ಮುದ್ದೆ ತಿಂದ್ರೆ ಸಾಕು!

First Published 28, Jun 2018, 6:27 PM IST
Mandya: Strange but True eat Ragi mudde and become Actor
Highlights

ಇದೊಂದು ವಿನೂತನ ಸ್ಫರ್ಧೆ. ಇಲ್ಲಿ ಹೊಟ್ಟೆಗೂ ನೀಡ್ತಾರೆ..ಜತೆಗೆ ಅವಕಾಶವನ್ನು ಕೊಡ್ತಾರೆ.. ಹಾಗಾದರೆ ಇನ್ನೇಕೆ ತಡ ನಿಮ್ಮದು ಒಂದು ಹೆಸರು ದಾಖಲಿಸಿ..

ಮಂಡ್ಯ[ಜೂ.28] ರಾಗಿ ಮುದ್ದೆ ತಿನ್ನುವ ಸ್ಫರ್ಧೆಯಲ್ಲಿ ಗೆದ್ದರೆ ನೀವು ಸಿನಿಮಾ ನಟರೂ ಆಗಬಹುದು. ಇದೇನು ಎತ್ತಿಂದೆತ್ತಣ ಸಂಬಂಧ ಅಂದುಕೊಂಡ್ರಾ.. ಈ ಸುದ್ದಿ ಓದಿ ಎಲ್ಲವೂ ಅರ್ಥವಾಗುತ್ತೆ. 

ನಗದು ಬಹುಮಾನವನ್ನು ಪಡೆದುಕೊಳ್ಳುವುದಲ್ಲದೇ ಸಿನಿಮಾದಲ್ಲಿ ನಟರಾಗಿಯೂ ಮಿಂಚಬಹುದು. ನೀವು ಮಾಡಬೇಕಾಗಿರಿವುದು ಇಷ್ಟೆ. ನಾಟಿ ಕೋಳಿ ಸಾಂಬಾರ್ ನಲ್ಲಿ ಹೊಟ್ಟೆ ತುಂಬಾ ರಾಗಿ ಮುದ್ದೆ ತಿನ್ನಬೇಕು.

ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ‘ಜನತಾ ಟಾಕೀಸ್ ಮತ್ತು ನಮ್ಮಹೈಕ್ಲು ತಂಡ ಹಾಗೂ ನೆಲದನಿ ಬಳಗ’ ಸೇರಿಕೊಂಡು ಜುಲೈ 1 ರಂದು ನಾಟಿಕೋಳಿ ಸಾಂಬಾರ್ ನಲ್ಲಿ ರಾಗಿಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಿದ್ದಾರೆ.

ಪ್ರವೇಶ ಧನ ನೂರು ರೂಪಾಯಿಗಳಿದ್ದು ಪ್ರಥಮ ಬಹುಮಾನ 5 ಸಾವಿರ ರೂ. ಇದೆ. ಜತೆಗೆ ದ್ವಿತೀಯ ಬಹುಮಾನ 3 ಸಾವಿರ ರೂ., ತೃತೀಯ ಬಹುಮಾನ 2 ಸಾವಿರ ರೂ. ಘೋಷಿಸಲಾಗಿದೆ.

ಇಷ್ಟೆ ಆಗಿದ್ದರೆ ಮುಗಿಯುತ್ತಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವವರು ‘ಆನೆಬಲ’ ಚಿತ್ರದಲ್ಲಿ ಅಭಿನಯಿಸಲು ಅವಕಾಶವಿದೆ. ಅಲ್ಲದೇ ಸಂಭಾವನೆಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸೂನಗನಹಳ್ಳಿ ರಾಜು [ಆನೆಬಲ ಚಿತ್ರದ ನಿರ್ದೇಶಕ 9310471022] ಮತ್ತು ಎಂ.ಪಿ.ದಿವಾಕರ [ಗ್ರಾಪಂ ಸದಸ್ಯ, 9844090996] ಸಂಪರ್ಕಿಸಬಹುದು.

loader