ಪುಟ್ಟರಾಜು ಪ್ರಯಾಣಿಸುತ್ತಿದ್ದ ಕಾರಿನ ಮುಂದೆ ಇದ್ದ ಬೊಲೇರೋ ಕಾರಿಗೆ ಮುಖ್ಯ ಎಂಜಿನಿಯರ್ ಅವರ ಕಾರು ಡಿಕ್ಕಿ ಹೊಡೆದಿದೆ. ಎರಡೂ ಕಾರು ಜಖಂ ಆದರೂ ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.

ಮಂಡ್ಯ(ಅ. 08): ಕೇಂದ್ರ ತಂಡವು ಕಾವೇರಿ ಕೊಳ್ಳದಲ್ಲಿ ಅಧ್ಯಯನ ನಡೆಸುತ್ತಿರುವ ವೇಳೆಯಲ್ಲಿ ಕಾರು ಅಪಘಾತವಾದ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನಲ್ಲಿ ಸಂಭವಿಸಿದೆ. ಚಿನಕುರಳಿ ಗ್ರಾಮದ ಬಳಿ ನಡೆದ ಈ ಘಟನೆಯಲ್ಲಿ ಜೆಡಿಎಸ್'ನ ಸಂಸದ ಪುಟ್ಟರಾಜು ಅವರು ಸ್ವಲ್ಪದರಲ್ಲಿ ಅಪಘಾತದಿಂದ ಪಾರಾಗಿದ್ದಾರೆ. ಪುಟ್ಟರಾಜು ಪ್ರಯಾಣಿಸುತ್ತಿದ್ದ ಕಾರಿನ ಮುಂದೆ ಇದ್ದ ಬೊಲೇರೋ ಕಾರಿಗೆ ಮುಖ್ಯ ಎಂಜಿನಿಯರ್ ಅವರ ಕಾರು ಡಿಕ್ಕಿ ಹೊಡೆದಿದೆ. ಎರಡೂ ಕಾರು ಜಖಂ ಆದರೂ ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಅಪಘಾತಕ್ಕೊಳಗಾದ ಬೊಲೇರೋ ಕಾರಿನ ಹಿಂದೆ ಮಂಡ್ಯ ಸಂಸದರು ತಮ್ಮ ಪಿಎ ಜೊತೆ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಪುಟ್ಟರಾಜು, ತಮಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.