ಮಂಡ್ಯ(ಸೆ.20): ಕಾವೇರಿ ತೀರ್ಪು ವಿರೋಧಿಸಿ ಮಂಡ್ಯ ಸಂಸದ ಸಿ.ಎಸ್. ಪುಟ್ಟರಾಜು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಂಡ್ಯ ಕ್ಷೇತ್ರದ ಜೆಡಿಎಸ್ ಸಂಸದರಾದ ಪುಟ್ಟರಾಜು ಅವರು ಜಿಲ್ಲಾಧಿಕಾರಿ ಮೂಲಕ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಸರ್ಕಾರ ಕೊಟ್ಟಿರುವ ಕಾರು, ಕಚೇರಿ ಸೌಲಭ್ಯಗಳನ್ನು ವಾಪಾಸ್ಸು ಮಾಡಿರುವುದಾಗಿ ತಿಳಿಸಿರುವ ಪುಟ್ಟರಾಜು ಅವರು ನಾಳೆ ದೆಹಲಿಗೆ ತೆರಳಿ ಸ್ಪೀಕರ್ ಭೇಟಿ ಮಾಡಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ತಮಿಳುನಾಡಿಗೆ ಸೆಪ್ಟೆಂಬರ್ 27ರವರೆಗೂ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಪುಟ್ಟರಾಜು ರಾಜೀನಾಮೆ ಸಲ್ಲಿಸಿದ್ದಾರೆ
