ಹಳೆಯ ದ್ವೇಷದ ಹಿನ್ನಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಯುವಕನೊಬ್ಬನ ಕೈ ಕತ್ತರಿಸಿರೋ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರಿನಲ್ಲಿ ನಡೆದಿರುವ ಘಟನೆಯಲ್ಲಿ ಕೈ ತುಂಡಾಗಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯ(ಜು.17): ಹಳೆಯ ದ್ವೇಷದ ಹಿನ್ನಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಯುವಕನೊಬ್ಬನ ಕೈ ಕತ್ತರಿಸಿರೋ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರಿನಲ್ಲಿ ನಡೆದಿರುವ ಘಟನೆಯಲ್ಲಿ ಕೈ ತುಂಡಾಗಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾತ್ರಿ 9 ಗಂಟೆಯ ವೇಳೆಯಲ್ಲಿ ಮದ್ದೂರಿನ ಕಸ್ತೂರಿ ಬಾ ಶಾಲೆ ಮುಂಭಾಗ ವರುಣ್ ಎಂಬ ಯುವಕ ನಿಂತಿದ್ದಾಗ ಕಾರಿನಲ್ಲಿ ಬಂದ ಸೂರಜ್ ಮತ್ತು ವ್ಯಾಸ ಹಾಗೂ ಆತನ ತಂಡ ವರುಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ವರುಣ್ ಕೈ ತುಂಡಾಗಿದ್ದು, ತೀವ್ರ ಗಾಯಗೊಂಡ ವರುಣ್'ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯಿಂದ ಮದ್ದೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಡಿವೈಎಸ್ಪಿ ನೇತೃತ್ವದ ತಂಡ ನಿಗಾ ವಹಿಸಿದೆ. ಈ ಸಂಬಂಧ ಕೇಸ್ ಬುಕ್ ಮಾಡಿಕೊಂಡಿರೋ ಮದ್ದೂರು ಟೌನ್ ಪೊಲೀಸರು 7 ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
