ಮಂಡ್ಯ​: ಪಾಂಡ​ವ​ಪುರ ಸಮೀ​ಪದ ಕನಗನಮರಡಿಯಲ್ಲಿ ಇತ್ತೀಚೆಗೆ ವಿಸಿ ನಾಲೆಗೆ ಬಸ್‌ ಉರುಳಿ 30 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿ​ಸಿ​ದಂತೆ ಚಾಲಕನನ್ನು ಭಾನುವಾರ ರಾತ್ರಿ ಬಂಧಿ​ಸ​ಲಾ​ಗಿದೆ. ಹೊಳಲು ಗ್ರಾಮದ ನಿವಾಸಿ ಶಿವಣ್ಣ ಬಂಧಿತ ಆರೋಪಿ.

ಘಟನೆ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದು ಕಳೆದ 15 ದಿನಗಳಿಂದ ಪೊಲೀಸರು ಆತನ ತಲಾಶೆಯಲ್ಲಿದ್ದರು. ಇದೀಗ ನಿವಾಸಿ ಚಾಲಕ ಶಿವಣ್ಣನನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸೋಮವಾರ ಮಂಡ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಬಸ್‌ ದುರಂತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪ್ರಾಥಮಿಕ ವರದಿ ಬಂದಿತ್ತು.