ಮಂಡ್ಯ[ಜೂ. 10]  ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿಯುತ್ತಿದ್ದರೆ ಮಂಡ್ಯ ಬಿಜೆಪಿ ಘಟಕದ ಅಧ್ಯಕ್ಷ ಮಾಡಿರುವ ಪೋಸ್ಟ್ ಒಂದು ವಿವಾದ ಎಬ್ಬಿಸಿದೆ.

ಮಂಡ್ಯ ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ್  ಫೇಸ್ ಬುಕ್ ನಲ್ಲಿ ಮಾಡಿರುವ ಪೋಸ್ಟ್ ಸಹಜವಾಗಿಯೇ ಆಕ್ರೋಶಕ್ಕೆ ಕಾರಣವಾಗಿದೆ.

ಅಗಲಿದ ಕಾರ್ನಾಡ್ ಬಗ್ಗೆ ರವಿ ಬೆಳಗೆರೆ ಖಾಸ್ ಬಾತ್

ಒಂದು ಧರ್ಮವನ್ನು ಅವಹೇಳನ ಮಾಡುವ ಕೊಳಚೆಗಳಿಗೆ ಇಂದು ಸರ್ಕಾರಿ ರಜೆಯ ಅನಿವಾರ್ಯ ಇರುವುದೇ..? ಎಂದು ಪೋಸ್ಟ್ ಮಾಡಿದ ಬಿಜೆಪಿ ಮುಖಂಡ ಅರವಿಂದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನಾಗರಿಕರರು ಸಾವನ್ನು ಸಂಭ್ರಮಿಸುವ ಕೆಟ್ಟ ಮನಸ್ಥಿತಿ ನಿಮ್ಮದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಹಿತಿ ಯು.ಆರ್.ಅನಂತಮೂರ್ತಿ ಮತ್ತು ಕೇಂದ್ರದ ಸಚಿವರಾಗಿದ್ದ ಅನಂತ್ ಕುಮಾರ್  ಮತ್ತು ನಡೆದಾಡುವ ದೇವರು ಸಿದ್ಧಗಂಗಾ ಸ್ವಾಮೀಜಿ ನಿಧನದ ಸಂದರ್ಭದಲ್ಲಿಯೂ ಕೆಲ ಕಿಡಿಗೇಡಿಗಳು ವಿಕೃತಿ ಮೆರೆಯುವ ಕೆಲಸ ಮಾಡಿದ್ದರು.