ಮಂಡ್ಯ[ನ.02]: ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಊಹಾಪೋಹ ಹಬ್ಬಸಿರುವ ಬೇಳೂರು ಗೋಪಾಲಕೃಷ್ಣ ವಿರುದ್ಧ ತಿರುಗಿಬಿದ್ದಿರುವ ಮಂಡ್ಯ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ. 

ನನ್ನ ನಿರೀಕ್ಷೆಗೂ ಮೀರಿ ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಚುನಾವಣಾ ಕಣದಿಂದ ನಿವೃತ್ತಿಹೊಂದುವುದು ನನ್ನ ದಿಕ್ಷನರಿಯಲ್ಲಿಯೇ ಇಲ್ಲ. ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ. ಇದೊಂದು ಚೀಪ್ ಪಾಪುಲಾರಿಟಿಗಾಗಿ ಬೇಳೂರು ಹೀಗೆ ಮಾಡುತ್ತಿದ್ದಾರೆ ಎಂದು ಡಾ. ಸಿದ್ದರಾಮಯ್ಯ ಗುಡುಗಿದ್ದಾರೆ.

ಪ್ರಧಾನಿ ಮೋದಿಯವರ ಆದರ್ಶ ಯೋಜನೆಗಳಿಗೆ ಇಷ್ಟಪಟ್ಟು ಚುನಾವಣೆಗೆ ನಿಂತಿದ್ದೇನೆ. ಇದೀಗ ಮತದಾರರಲ್ಲಿ ಗೊಂದಲ ಉಂಟಾಗುತ್ತಿದೆ. ನನಗೆ ಹಲವಾರು ಜನ ಕರೆ ಮಾಡುತ್ತಿದ್ದಾರೆ. ಸೋಲು ಗೆಲುವುಗಳು ಇದ್ದದ್ದೇ. ಇಂದು ಸೋತರೆ ಮತ್ತೆ ನಾಳೆ ಆಶಿರ್ವಾದ ಮಾಡುತ್ತಾರೆ ನನ್ನ ಗೆಲುವು ನಿಶ್ಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಬೇಳೂರು ಗೋಪಾಲಕೃಷ್ಣ ಯಾರು ಅಂತಾನೇ ಗೊತ್ತಿಲ್ಲ. ಹಿಂದೆ ಸೈಕಲ್ ಹೊಡೆದುಕೊಂಡು, ಟೋಫಿ ಹಾಕೊಂಡು ಬಂದಿದ್ದು ಕೇಳಿದ್ದೆ. ಬಿಜೆಪಿ, ಕೆಜೆಪಿ ಹೀಗೆ ಎಲ್ಲಾ ಪಕ್ಷದಲ್ಲಿ ಇದ್ದರು. ಈಗ ಯಾವ ಪಕ್ಷದಲ್ಲಿ ಇದ್ದಾರೆ ಎಂದು ಗೊತ್ತಿಲ್ಲ ಎಂದು ಬಿಜೆಪಿ ಅಭ್ಯರ್ಥಿ ವ್ಯಂಗ್ಯವಾಡಿದ್ದಾರೆ.

ನಾಳೆ ಅಂದರೆ ನವೆಂಬರ್ ಮೂರರಂದು ಚುನಾವಣೆ ನಡೆಯಲಿದ್ದು, ನವೆಂಬರ್ 06ರಂದು ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ.