ಬೆಂಗಳೂರು: ಮೈಸೂರು ರಾಜವಂಶಸ್ಥರಾದ ಪ್ರಮೋದಾ ದೇವಿ ಅವರು ಮಂಗಳವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ ದರು.

ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಪಾಂಡವಪುರ ಅಮೃತ್ ಮಹಲ್ ಕಾವಲ್ ಸರ್ವೆ ನಂ.1ರ (ಬೇಬಿ ಬೆಟ್ಟ) 1500ಕ್ಕೂ ಹೆಚ್ಚು ಎಕರೆ ಭೂಮಿ ತಮ್ಮದು. ಈ ಜಮೀನನ್ನು ತಮ್ಮ ಖಾತೆಗೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಬೇಕು ಎಂದು ಮನವಿ ಮಾಡಿ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪ್ರಮೋದಾ ದೇವಿ ಅವರು ಪತ್ರ ಬರೆದಿದ್ದರು.

ಇದು ಮೈಸೂರು ಮಹಾಸಂಸ್ಥಾನದ ಜಾಗವಾಗಿದ್ದು, 1950 ರಿಂದ ಅನ್ವಯವಾಗುವಂತೆ ಮೈಸೂರು ರಾಜವಂಶಸ್ಥರ ಮಾಲೀಕತ್ವಕ್ಕೆ ಬಂದಿದೆ. ಇದಕ್ಕೆ ಪಾಂಡವಪುರ ತಹಸೀಲ್ದಾರ್ ಹಾಗೂ ಕಂದಾಯ ದಾಖಲೆಗಳ ಪ್ರಕಾರ ಮೈಸೂರು ವಂಶದ ಹೆಸರಿನಲ್ಲೇ ಆರ್‌ಟಿಸಿ ಇದೆ.

ಈ ಬಗ್ಗೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದು, ನಮ್ಮ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು. ಇದೇ ವಿಷಯವಾಗಿ ಮಂಗಳ ವಾರ ಸಿಎಸ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಮೈಸೂರಿನ ಅರಮನೆ ಎದುರಿನ ದೊಡ್ಡ ಕೆರೆ ಮೈ ದಾನದ ಮಾಲೀಕತ್ವದ ಹಕ್ಕನ್ನು ಕೂಡ ಅವರು ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ.