ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪದಡಿ ಜಿಲ್ಲೆಯ ಸಿಂದಗಿಯ ಪರಶುರಾಮ ವಾಗ್ಮೋರೆಯನ್ನು ಎಸ್‌ಐಟಿ  ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ ಬೆನ್ನ ಹಿಂದೆಯೇ, ವಾಗ್ಮೋರೆ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪದಡಿ ಜಿಲ್ಲೆಯ ಸಿಂದಗಿಯ ಪರಶುರಾಮ ವಾಗ್ಮೋರೆಯನ್ನು ಎಸ್‌ಐಟಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ ಬೆನ್ನ ಹಿಂದೆಯೇ, ವಾಗ್ಮೋರೆ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.

ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಚಾಲೇಶ್ವರಿ ತೊನಶ್ಯಾಳ ಅವರದ್ದು ಎನ್ನಲಾದ ಫೇಸ್ ಬುಕ್ ಅಕೌಂಟ್‌ನಲ್ಲಿ ಈ ದೇಶದ ತಳಹದಿ ಹಿಂದುತ್ವ. ಲದ್ದಿಜೀವಿಗಳು ಹಿಂದೂ ವಿರೋಧಿ ಚಟುವಟಿಕೆ ಮಾಡಿದ್ರೆ ಮನೆ ಮನೆಗೂ ಪರಶುರಾಮ ವಾಗ್ಮೋರೆ ಹುಟ್ಟುತ್ತಾನೆ ಎಂದು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. 

ಬುಧವಾರವಷ್ಟೇ, ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್, ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪರಶುರಾಮ ವಾಗ್ಮೋರೆ ಭಾವಚಿತ್ರ ಹಾಕಿ ಮಾತೃಭೂಮಿ ರಕ್ಷಣೆಗಾಗಿ ಮುಡುಪಾಗಿದೆ ನನ್ನ ಪ್ರಾಣ, ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ. ಪರಶುರಾಮ ವಾಗ್ಮೋರೆ ಧರ್ಮ ರಕ್ಷಕ ಎಂದು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. 

ಸಂಪರ್ಕಕ್ಕೆ ಸಿಗದ ಮಂಚಾಲೇಶ್ವರಿ: ಪರಶುರಾಮ ವಾಗ್ಮೋರೆ ಕುರಿತ ಪೋಸ್ಟ್ ಬಗ್ಗೆ ಪ್ರತಿಕ್ರಿಯೆಗೆ ಮಂಚಾಲೇಶ್ವರಿ ತೊನಶ್ಯಾಳ ಮೊಬೈಲ್ ಸಂಪರ್ಕಕಕ್ಕೆ ಲಭ್ಯವಾಗಿಲ್ಲ.