ಹಾವೇರಿ ಜಿಲ್ಲೆಯ ಉಪ್ಪುಣಸಿ ಗ್ರಾಮದ ಗೀತಾ ಮತ್ತು ಗುಡ್ಡದ ಮತ್ತಳ್ಳಿ ಗ್ರಾಮದ ಶಿವಾನಂದ ನಾಡರ್ ಇಬ್ಬರು ವಧು ವರರು. ಇವರಿಬ್ಬರು ಕಾಲೇಜಿಗೆ ಹೋಗುವಾಗಲೇ ಪ್ರೀತಿಸುತ್ತಿದ್ದರು. ಆದರೆ ಶಿವಾನಂದನಿಗೆ ಕಳೆದೆರಡು ವರ್ಷಗಳ ಹಿಂದೆ ಪೋಲಿಸ್ ಇಲಾಖೆಯಲ್ಲಿ ನೌಕರಿ ಸಿಕ್ಕಿದೆ. ಇದಾದ ಮೇಲೆ ಮನಸ್ಸು ಬದಲಾಯಿಸಿ ಗೀತಾಳಿಂದ ಎಸ್ಕೇಪ್​ ಅಗಲು ನೋಡಿದ್ದಾನೆ. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿ ಠಾಣೆ ಮೆಟ್ಟಿಲೇರಿದ್ದಳು. ಯುವಕನನ್ನು ಕರೆಸಿದ ಆಡೂರು ಪೋಲಿಸರು ರಾಜೀ ಪಂಚಾಯ್ತಿ ಮಾಡಿಸಿ, ಊರ ಹಿರಿಯರ ಸಮ್ಮುಖದಲ್ಲಿ ಮದ್ವೆಗೆ ಒಪ್ಪಿಸಿದ್ದಾರೆ. ಕೂಡಲೇ ಗ್ರಾಮದ ಹಿರಿಯರೆಲ್ಲ ಒಟ್ಟಿಗೆ ಸೇರಿ ಆಡೂರಿನ ಮಾಲತೇಶ್ವರ ದೇಗುಲದಲ್ಲಿ ಇಬ್ಬರಿಗೂ ಮದುವೆ  ಮಾಡಿಸಿದ್ದಾರೆ.

ಹಾವೇರಿ(ಅ.14): ಹಾವೇರಿ ಜಿಲ್ಲೆಯ ಉಪ್ಪುಣಸಿ ಗ್ರಾಮದ ಗೀತಾ ಮತ್ತು ಗುಡ್ಡದ ಮತ್ತಳ್ಳಿ ಗ್ರಾಮದ ಶಿವಾನಂದ ನಾಡರ್ ಇಬ್ಬರು ವಧು ವರರು. ಇವರಿಬ್ಬರು ಕಾಲೇಜಿಗೆ ಹೋಗುವಾಗಲೇ ಪ್ರೀತಿಸುತ್ತಿದ್ದರು. ಆದರೆ ಶಿವಾನಂದನಿಗೆ ಕಳೆದೆರಡು ವರ್ಷಗಳ ಹಿಂದೆ ಪೋಲಿಸ್ ಇಲಾಖೆಯಲ್ಲಿ ನೌಕರಿ ಸಿಕ್ಕಿದೆ. ಇದಾದ ಮೇಲೆ ಮನಸ್ಸು ಬದಲಾಯಿಸಿ ಗೀತಾಳಿಂದ ಎಸ್ಕೇಪ್​ ಅಗಲು ನೋಡಿದ್ದಾನೆ. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿ ಠಾಣೆ ಮೆಟ್ಟಿಲೇರಿದ್ದಳು.

ಯುವಕನನ್ನು ಕರೆಸಿದ ಆಡೂರು ಪೋಲಿಸರು ರಾಜೀ ಪಂಚಾಯ್ತಿ ಮಾಡಿಸಿ, ಊರ ಹಿರಿಯರ ಸಮ್ಮುಖದಲ್ಲಿ ಮದ್ವೆಗೆ ಒಪ್ಪಿಸಿದ್ದಾರೆ. ಕೂಡಲೇ ಗ್ರಾಮದ ಹಿರಿಯರೆಲ್ಲ ಒಟ್ಟಿಗೆ ಸೇರಿ ಆಡೂರಿನ ಮಾಲತೇಶ್ವರ ದೇಗುಲದಲ್ಲಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.

ಲವ್ ಮಾಡಿ ಸರಕಾರಿ ಕೆಲಸ ಸಿಕ್ಕ ಮೇಲೆ ಕೈ ಕೊಟ್ಟು ಪರಾರಿಯಾಗ್ತಿದ್ದವನಿಗೆ ಪ್ರೇಯಸಿ ಸರಿಯಾಗೆ ಬುದ್ದಿ ಕಲಿಸಿದ್ದಾಳೆ. ಕೊನೆಗೂ ಆತನನ್ನೆ ಮದ್ವೆಯಾಗಿ ಪ್ರೀತಿಯಲ್ಲೂ ಗೆದ್ದಿದ್ದಾಳೆ.