ಪೊಲೀಸರು ಹೇಳುವ ಪ್ರಕಾರ, ಪೇಂಟಿಂಗ್'ನಲ್ಲಿ ಆಸಕ್ತಿ ಇದ್ದ ನಗ್ಮಾ ಪರ್ವೀನ್ ಅವರು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಬಿಡಿಸಿ ತನ್ನ ಪತಿಗೆ ತೋರಿಸಿದ್ದಾರೆ.  ಆಗ ಪತಿ ಪರ್ವೇಜ್ ಖಾನ್ ಅವರು ಪತ್ನಿಗೆ ಚೆನ್ನಾಗಿ ಹೊಡೆದುಬಡಿದಿದ್ದಾನೆ. ನಗ್ಮಾ ಪರ್ವೀನ್ ತನ್ನ ತಂದೆಗೆ ಈ ವಿಷಯ ತಿಳಿಸುತ್ತಾರೆ. ಮಹಿಳೆಯ ತಂದೆಯು ಮನೆಗೆ ಬಂದು ಅಳಿಯನನ್ನು ವಿಚಾರಿಸುತ್ತಾರೆ. "ನಗ್ಮಾಗೆ ಹುಚ್ಚು ಹಿಡಿದಿದೆ. ಮೋದಿ, ಆದಿತ್ಯನಾಥ್ ಅವರ ಚಿತ್ರಗಳನ್ನು ಬಿಡಿಸಿದವಳನ್ನು ಮನೆಯಲ್ಲಿ ಹೇಗೆ ಇಟ್ಟುಕೊಳ್ಳುವುದು?" ಎಂದು ಆಕೆಯ ತಂದೆಯನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಲಕ್ನೋ(ಸೆ. 10): ಪ್ರಧಾನಿ ನರೇಂದ್ರ ಮೋದಿ ಮತ್ತು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಪೇಂಟಿಂಗ್'ನಲ್ಲಿ ಬಿಡಿಸಿದ ಮಹಿಳೆಯೊಬ್ಬಳನ್ನು ಆಕೆಯ ಪತಿ ಮನೆಯಿಂದ ಹೊರಹಾಕಿದ ಘಟನೆ ಉತ್ತರಪ್ರದೇಶದ ಬಾಲ್ಲಿಯಾ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲ್ಲಿಯಾ ಜಿಲ್ಲೆಯ ಸಿಕಂದರ್'ಪುರ್ ತಾಲೂಕಿನ ಬಸಾಕಿರ್'ಪುರ್ ಗ್ರಾಮದಲ್ಲಿ ನಗ್ಮಾ ಪರ್ವೀನ್ ಅವರನ್ನು ಪತಿ ಪರ್ವೇಜ್ ಖಾನ್ ಚೆನ್ನಾಗಿ ಥಳಿಸಿದ್ದಲ್ಲೆ, ತನ್ನ ಮನೆಯಿಂದ ಹೊರದಬ್ಬಿದ್ದಾನೆನ್ನಲಾಗಿದೆ. ಮಹಿಳೆಯ ಕುಟುಂಬದವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರು ಹೇಳುವ ಪ್ರಕಾರ, ಪೇಂಟಿಂಗ್'ನಲ್ಲಿ ಆಸಕ್ತಿ ಇದ್ದ ನಗ್ಮಾ ಪರ್ವೀನ್ ಅವರು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಬಿಡಿಸಿ ತನ್ನ ಪತಿಗೆ ತೋರಿಸಿದ್ದಾರೆ. ಆಗ ಪತಿ ಪರ್ವೇಜ್ ಖಾನ್ ಅವರು ಪತ್ನಿಗೆ ಚೆನ್ನಾಗಿ ಹೊಡೆದುಬಡಿದಿದ್ದಾನೆ. ನಗ್ಮಾ ಪರ್ವೀನ್ ತನ್ನ ತಂದೆಗೆ ಈ ವಿಷಯ ತಿಳಿಸುತ್ತಾರೆ. ಮಹಿಳೆಯ ತಂದೆಯು ಮನೆಗೆ ಬಂದು ಅಳಿಯನನ್ನು ವಿಚಾರಿಸುತ್ತಾರೆ. "ನಗ್ಮಾಗೆ ಹುಚ್ಚು ಹಿಡಿದಿದೆ. ಮೋದಿ, ಆದಿತ್ಯನಾಥ್ ಅವರ ಚಿತ್ರಗಳನ್ನು ಬಿಡಿಸಿದವಳನ್ನು ಮನೆಯಲ್ಲಿ ಹೇಗೆ ಇಟ್ಟುಕೊಳ್ಳುವುದು?" ಎಂದು ಆಕೆಯ ತಂದೆಯನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ.

ನಗ್ಮಾ ಹಾಗೂ ಆಕೆಯ ಕುಟುಂಬದವರು ಇದು ವರದಕ್ಷಿಣೆ ಕಿರುಕುಳವೆಂದೂ ಆರೋಪಿಸಿದ್ದಾರೆ. ಪರ್ವೇಜ್ ಖಾನ್ ಹಾಗೂ ಆತನ ಮನೆಯವರು ತನಗೆ ನಿತ್ಯ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರೆಂದು ನಗ್ಮಾ ಪರ್ವೀನ್ ದೂರಿದ್ದಾಳೆ. ಪೊಲೀಸರು ಸದ್ಯದಲ್ಲೇ ಎಫ್'ಐಆರ್ ದಾಖಲಿಸಿಕೊಳ್ಳಲಿದ್ದಾರೆನ್ನಲಾಗಿದೆ.