ಉಳುಮೆ ಮಾಡದಂತೆ ತಡೆಯಲು ಮಗ ಮಾಡಿದ್ದೇನು?ಹೆತ್ತ ತಾಯಿಯನ್ನೇ ಟ್ರ್ಯಾಕ್ಟರ್ ಮುಂದೆ ಎಸೆದ ಮಗಮಹಾರಾಷ್ಟ್ರದ ವಾಸಿಮ್ ಜಿಲ್ಲೆಯಲ್ಲಿ ಘಟನೆಓರ್ವನನ್ನು ಬಂಧಿಸಿದ ಪೊಲೀಸರು
ವಾಸಿಮ್(ಜೂ.23): ತನ್ನ ಎದುರಾಳಿ ಭೂಮಿ ಉಳುಮೆ ಮಾಡುವುದನ್ನು ನಿಲ್ಲಿಸಲು ಮಗನೊಬ್ಬ ತನ್ನ ತಾಯಿಯನ್ನೆ ಟ್ರಾಕ್ಟರ್ ಮುಂದೆ ಎಸೆದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೇಗಾವ್ ಪೊಲೀಸರು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಿದ್ದಾರೆ. ಭೂಮಿ ವಿವಾದವೇರ್ಪಟ್ಟಿದ್ದ ವ್ಯಕ್ತಿ ಟ್ರಾಕ್ಟರ್ ನಲ್ಲಿ ಭೂಮಿ ಉಳುತ್ತಿದ್ದಾಗ ತಡೆಯಲು ಮುಂದಾದ ಮಗ, ತನ್ನ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದಿದ್ದಾನೆ.
ಭೂ ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಎರಡು ಕಡೆಯವರ ಮೇಲೂ ಎಫ್ ಐಆರ್ ದಾಖಲಿಸಲಾಗಿದೆ. ಒಬ್ಬನನ್ನು ಬಂಧಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ ಎಂದು ಮಾಲೇಗಾವ್ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ್ ನಾಯಕ್ ನಾವಾರೆ ತಿಳಿಸಿದ್ದಾರೆ.
