ತನ್ನ ಕಿರಿಯವರೆಲ್ಲರೂ ಮದುವೆಯಾದರೂ ತನಗೆ ಹುಡುಗಿ ಸಿಗಲಿಲ್ಲವೆಂಬ ಚಿಂತೆ ಈತನಿಗೆ ಕಾಡುತ್ತಿತ್ತು.

ಬೆಂಗಳೂರು(ಜು.06):ವಿವಾಹವಾಗಲು ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವೈಯಾಲಿಕಾವಲ್'ನ ಕೊಕನಟ್ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.ಶಿವರಾಜ್(30)ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ತಮಿಳುನಾಡಿನಿಂದ 4 ತಿಂಗಳ ಹಿಂದೆ ನಗರಕ್ಕೆ ಬಂದು ನೆಲಸಿದ್ದ.

ತನ್ನ ಕಿರಿಯವರೆಲ್ಲರೂ ಮದುವೆಯಾದರೂ ತನಗೆ ಹುಡುಗಿ ಸಿಗಲಿಲ್ಲವೆಂಬ ಚಿಂತೆ ಈತನಿಗೆ ಕಾಡುತ್ತಿತ್ತು. ಇದನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಅದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಪೋಷಕರು ತಿಳಿಸಿದ್ದಾರೆ.