ನವದೆಹಲಿ [ಸೆ.11]: ಪತಿ- ಪತ್ನಿಯರ ಮಧ್ಯೆ ಸಣ್ಣಪುಟ್ಟ ಕಾರಣಕ್ಕೆ ಜಗಳವಾಗಿ ವಿಚ್ಛೇದನ ಪಡೆಯುವ ಹಂತಕ್ಕೆ ತಲುಪುತ್ತಿರುವ ಈ ಕಾಲದಲ್ಲಿ, ಇಲ್ಲೊಬ್ಬ ಪತಿ ಮಹಾಶಯ ಮಾತ್ರ ತನ್ನ ಪತ್ನಿ ಸುಖನಿದ್ರೆ ಮಾಡಲಿ ಎಂಬ ಕಾರಣಕ್ಕೆ 6 ಗಂಟೆ ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದ್ದಾನೆ. 

ಕೂರ್ಟಿ ಲೀ ಜಾನ್ಸನ್‌ ಎಂಬುವವರು ಈ ಚಿತ್ರವನ್ನು ಟ್ವೀಟ್‌ ಮಾಡಿದ್ದು, ಭಾರೀ ವೈರಲ್‌ ಆಗಿದೆ. ಈ ಘಟನೆ ನಡೆದ ಸ್ಥಳ, ಪ್ರಯಾಣದ ಮಾರ್ಗದ ಮಾಹಿತಿ ಲಭ್ಯವಾಗಿಲ್ಲ. ಟ್ವೀಟ್‌ನಲ್ಲಿ ಹೇಳಿದಂತೆ ವಿಮಾನದಲ್ಲಿ ಮೂರು ಸೀಟುಗಳ ಮೇಲೆ ಮಲಗಿದ್ದ ಪತ್ನಿಗಾಗಿ, ಪತಿಯೋರ್ವ ಬರೋಬ್ಬರಿ 6 ತಾಸು ನಿಂತಿದ್ದನಂತೆ. 

ಹೆಚ್ಚಿನ ಕರ್ನಾಟಕ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಹಪ್ರಯಾಣಿಕ ಜಾನ್ಸನ್‌ ಈ ದೃಶ್ಯವನ್ನು ಕ್ಲಿಕ್ಕಿಸಿ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದ. ಅಲ್ಲದೇ, ‘ಇದಲ್ಲವೇ ನಿಜವಾದ ಪ್ರೀತಿ ಅಂದರೆ’ ಎಂದು ಅಡಿಬರಹ ಬರೆದುಕೊಂಡಿದ್ದಾನೆ. ಈ ಚಿತ್ರಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಪತಿಯನ್ನು ನಿಲ್ಲಿಸಿ ಪತ್ನಿ 6 ತಾಸು ಮಲಗಿದ್ದು ಎಷ್ಟು ಸರಿ ಎಂದು ಕೆಲವರು ಮರು ಪ್ರಶ್ನೆಯನ್ನೂ ಹಾಕಿದ್ದಾರೆ.