ಆತ ಹೇಳಿ ಕೇಳಿ ಮಹಾನ್ ಶೋಕಿಲಾಲ. ಆತನ ಮೋಜು ಮಸ್ತಿಗೆ ಪ್ರತಿ ದಿನ ಹೊಸ ಹೊಸ ಹುಡ್ಗೀರ್ ಬೇಕಿತ್ತು. ಈ ಖಯಾಲಿಗಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದಾನೆ. ಹಾಗಾದ್ರೆ.. ಲಕ್ಷಾಂತರ ಹಣ ಹೇಗ್ ಸಂಪಾದಿಸ್ತಿದ್ದ ಅನ್ನೋದೇ ಇಂಟರೆಸ್ಟಿಂಗ್. ಅದೇನ್ ಅಂತ ನೋಡಿ..
ವಿಜಯಪುರ(ನ. 04): ಕಾಮ ಸಹಜ. ಆದರೆ, ಅತಿಯಾದರೆ ಎಂತಹ ವಿಪತ್ತು ಸಂಭವಿಸುತ್ತದೆ ಎಂಬುದಕ್ಕೆ ಸಾಕ್ಷಿ ಮಧು ಮಾಳಿ. ಈತ ಕಾಮದ ಹುಚ್ಚಿಗೆ ಸಿಕ್ಕು ಈಗ ಜೈಲಿನ ಕಂಬಿ ಎಣಿಸುವಂತಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಜಂತಿ ಗ್ರಾಮದ ರಮೇಶ್ ಅಲಿಯಾಸ್ ಮಧು ಮಾಳಿಗೆ ಪುಣೆ ಮತ್ತು ಸಾಂಗಲಿಯ ಕಾಮಾಟಿಪುರಗಳು ಫೇವರಿಟ್ ಅಡ್ಡಾ. ಅಲ್ಲಿ ಆತನಿಗೆ ಗೊತ್ತಿಲ್ಲ ಬೆಲವಣ್ಣೆಯರಿಲ್ಲ. ತೀಟೆ ತೀರಿಸಿಕೊಳ್ಳಲು ಆ ವೇಶ್ಯೆಯರಿಗೆ ದಿನವೂ ಹಣ ಕುಕ್ಕುತ್ತಿದ್ದ. ಇಷ್ಟು ಹಣ ಸಂಪಾದಿಸಲು ಹೇಗೆ ಸಾಧ್ಯ? ಮೋಜು- ಮಸ್ತಿಗಾಗಿ ವಿಜಯಪುರ ಸುತ್ತಲಿನ 13 ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ಎಗರಿಸಿದ್ದ. ಸದ್ಯ ಖತರ್ನಾಕ್ ಕಾಮುಕ ಕಳ್ಳನಿಗೆ ವಿಜಯಪುರದ ಗೋಳಗುಮ್ಮಟ ಠಾಣಾ ಪೊಲೀಸ್ರು ಕೋಳ ತೊಡಿಸಿದ್ದಾರೆ.
ಇನ್ನು ಕಳ್ಳತನದ ಚಿನ್ನದ ಆಭರಣಗಳನ್ನ ವೇಶ್ಯೆಯರು ಹಾಗೂ ಪಿಂಪ್'ಗಳಿಗೆ ಗಿಫ್ಟಾಗಿ ನೀಡ್ತಿದ್ದನಂತೆ. ಕೆಲವು ಸಲ ಬಂಗಾರವನ್ನ ಮಾರಿ ಬಂದ ಹಣವನ್ನ ಬೆಲೆವೆಣ್ಣುಗಳಿಗೆ ನೀಡಿ ಕಾಮತೃಷೆ ತೀರಿಸಿಕೊಂಡಿದ್ದಾನೆ. ಸದ್ಯ ಬಂಧಿತ ಕಾಮುಕ ರಮೇಶನಿಂದ ಪೊಲೀಸರು ಅರ್ಧ ಕೆ.ಜಿ ಬಂಗಾರ, 1 ಕೆ.ಜಿ ಬೆಳ್ಳಿ ಸಾಮಾನು, ಕಳ್ಳತನಕ್ಕೆ ಬಳಸುತ್ತಿದ್ದ ಬೈಕ್, ಹಾಗೂ 15 ಸಾವಿರ ರೂಪಾಯಿ ನಗದು ಹಣವನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ವೇಶ್ಯೆಯರಿಗೆ ನೀಡಿದ್ದ ಚಿನ್ನಾಭರಣಗಳನ್ನ ರಿಕವರಿ ಮಾಡಿ ಮೂಲ ಮಾಲೀಕರಿಗೆ ವಿಜಯಪುರ ಪೊಲೀಸ್ರು ಹಿಂತಿರುಗಿಸಿದ್ದಾರೆ.
- ಪ್ರಸನ್ನ ದೇಶಪಾಂಡೆ, ಸುವರ್ಣ ನ್ಯೂಸ್
