ಪುಣೆ(ಸೆ.28): ನಮ್ಮ ಜನರಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ, ಮನೆಯ ಮುಂದೆ ಅನಾಥವಾಗಿದ್ದ ಮೂರು ಮುದ್ದು ನಾಯಿ ಮರಿಗಳಿಗೆ ಅನ್ನ ಹಾಕಿದ್ದಕ್ಕೆ ತಾಯಿ-ಮಗಳಿಗೆ ಪಕ್ಕಾದ ಮನೆಯ ನಿವಾಸಿಯೊಬ್ಬ ಶೂ ನಿಂದ ಹಲ್ಲೆ ನಡೆಸಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪಾರ್ಟ್ ಮೆಂಟ್ ಮುಂಭಾಗದಲ್ಲಿದ್ದ ಅನಾಥವಾಗಿ ಬಿದ್ದ ಮೂರು ನಾಯಿ ಮರಿಗಳಿಗೆ ಸಿಜಲ್ ಮತ್ತು ಆಕೆಯ ತಾಯಿ ಸೊನಾಲಿ ಅನುಕಂಪ ತೋರಿ ಊಟ ಹಾಕಿ ಆರೈಕೆ ಮಾಡಿದ್ದಾರೆ. ಆದರೆ ಅದನ್ನು ಸಹಿಸದ ಅದೇ ಅಪಾರ್ಟ್ ಮೆಂಟ್'ನ ಮತ್ತೊಬ್ಬ ನಿವಾಸಿ ಸ್ಥಳೀಯ ಮುನ್ಸಿಪಾಲಿಟಿಗೆ ಕರೆ ಮಾಡಿ ನಾಯಿಗಳನ್ನು ತೆರವುಗೊಳಿಸುವಂತೆ ದೂರು ನೀಡಿದ್ದಾರೆ. 

ಈ ದೂರನ್ನುಆಧರಿಸಿ ಮುನ್ಸಿಪಾಲಿಟಿ ಸಿಬ್ಬಂದಿ ನಾಯಿಗಳನ್ನು ತೆರೆವು ಗೊಳಿಸಲು ಬಂದಾಗ ಸಿಜಲ್ ಮತ್ತು ಆಕೆಯ ತಾಯಿ ಅಡ್ಡಿ ಪಡಿಸಿದ ಸಂದರ್ಭದಲ್ಲಿ ಪಕ್ಕದ ಮನೆಯ ನಿವಾಸಿ ಕೋಪಗೊಂಡು ಶೂನಿಂದ ಹಲ್ಲೆ ನಡೆಸಿದ್ದಾನೆ. ಇದು ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.