ಬಿರಿಯಾನಿ ದುಡ್ಡು ಕೇಳಿದ್ದಕ್ಕೇ ಮಾಲೀಕನಿಗೆ ಗುಂಡಿಟ್ಟರು..!

Man Shot Dead For Selling Biryani At Rs. 190 A Plate
Highlights

‘ಅನ್ನದಾತಾ ಸುಖಿಭವ’ ಎಂಬುದು ನಮ್ಮ ಸಂಸ್ಕೃತಿಯ ಲಕ್ಷಣ. ಹೊಟ್ಟೆ ತುಂಬ ಊಟ ಕೊಟ್ಟವನಿಗೆ ಹರಿಸುವ ಪರಿ ಇದು. ಆದರೆ ಹೊಟ್ಟೆ ತುಂಬಾ ಚಿಕನ್ ಬಿರಿಯಾನಿ ತಿಂದು ದುಡ್ಡು ಕೊಡಿ ಅಂದಿದ್ದಕ್ಕೆ ಅಂಗಡಿ ಮಾಲೀಕನನ್ನು ಗ್ರಾಹಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 

ಕೋಲ್ಕತ್ತಾ(ಜೂ.5): ‘ಅನ್ನದಾತಾ ಸುಖಿಭವ’ ಎಂಬುದು ನಮ್ಮ ಸಂಸ್ಕೃತಿಯ ಲಕ್ಷಣ. ಹೊಟ್ಟೆ ತುಂಬ ಊಟ ಕೊಟ್ಟವನಿಗೆ ಹರಿಸುವ ಪರಿ ಇದು. ಆದರೆ ಹೊಟ್ಟೆ ತುಂಬಾ ಚಿಕನ್ ಬಿರಿಯಾನಿ ತಿಂದು ದುಡ್ಡು ಕೊಡಿ ಅಂದಿದ್ದಕ್ಕೆ ಅಂಗಡಿ ಮಾಲೀಕನನ್ನು ಗ್ರಾಹಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 

ನಾಲ್ವರು ಗ್ರಾಹಕರು ಬಿರಿಯಾನಿ ತಿನ್ನಲ್ಲು ಹೊಟೇಲ್ ಒಂದಕ್ಕೆ ಬಂದಿದ್ದಾರೆ. ಪ್ಲೇಟ್ ಒಂದಕ್ಕೆ 190 ರುಪಾಯಿ ಕೊಡಿ ಅಂದಿದ್ದಕ್ಕೆ ಮಾಲೀಕನ ಮೇಲೆ ನಾಲ್ವರು ಜಗಳಕ್ಕೆ ನಿಂತಿದ್ದಾರೆ. ಜಗಳ ತಾರಕಕ್ಕೇರಿದ್ದು ಈ ವೇಳೆ ನಾಲ್ವರಲ್ಲಿ ಒಬ್ಬ ಗನ್ ತೆಗೆದು ಗುಂಡು ಹಾರಿಸಿದ್ದಾನೆ. ಮಾಲೀಕ ಸ್ಥಳದಲ್ಲೇ ಮೃತಪಟ್ಟಿದ್ದನ್ನು ನೋಡಿ ಎಲ್ಲರೂ ಪರಾರಿಯಾಗಿದ್ದಾರೆ. 

ಮೃತ ಅಂಗಡಿ ಮಾಲೀಕನನ್ನು ಸಂಜಯ್ ಮೊಂಡಲ್ ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಶಂಕಿತರ ಪೈಕಿ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಇನ್ನುಳಿದವರಿಗಾಗಿ ಶೋಧ ನಡೆಸಿದ್ದಾರೆ. ಘಟನೆ ವೇಳೆ ಫಿರೋಜ್ ಜತೆ ರಾಜಾ, ಮೊಗ್ರಿ ಮತ್ತು ಸಲ್ಮಾನ್ ಇದ್ದರು ಎಂದು ಪೊಲೀಸರು ಮಾಹಿತಿ ಮಾಹಿತಿ ನೀಡಿದ್ದಾರೆ.

loader