ವಿವಾಹ ಸಂದರ್ಭದಲ್ಲಿ  ಹಲವು ಮಹಿಳೆಯರು ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಆರೋಪಿಯೊಬ್ಬ  ಮಹಿಳೆ ಬಳಿ ಬಂದು ನನ್ನ ಜೊತೆ ಡ್ಯಾನ್ಸ್ ಮಾಡು ಎಂದು ಒತ್ತಾಯ ಮಾಡಿದ್ದಾನೆ. ಇದಕ್ಕೆ ಆ ಮಹಿಳೆ ಒಪ್ಪದ ಕಾರಣ ವೇದಿಕೆಯಲ್ಲೇ ರೈಫಲ್’ನಲ್ಲಿ ಗುಂಡಿಕ್ಕಿ ಕೊಂದಿದ್ದಾನೆ.

ಭಾಟಿಂಡಾ (ಡಿ.04): ಜೊತೆಯಲ್ಲಿ ಡ್ಯಾನ್ಸ್ ಮಾಡಲು ಬರದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನು ಸ್ಟೇಜ್ ನಲ್ಲೇ ಗುಂಡಿಕ್ಕಿ ಕೊಂದಿರುವ ಭೀಕರ ಕೃತ್ಯ ಪಂಜಾಬ್’ನ ಭಾಟಿಂಡಾದಲ್ಲಿ ನಡೆದಿದೆ

ವಿವಾಹ ಸಂದರ್ಭದಲ್ಲಿ ಹಲವು ಮಹಿಳೆಯರು ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಆರೋಪಿಯೊಬ್ಬ ಮಹಿಳೆ ಬಳಿ ಬಂದು ನನ್ನ ಜೊತೆ ಡ್ಯಾನ್ಸ್ ಮಾಡು ಎಂದು ಒತ್ತಾಯ ಮಾಡಿದ್ದಾನೆ. ಇದಕ್ಕೆ ಆ ಮಹಿಳೆ ಒಪ್ಪದ ಕಾರಣ ವೇದಿಕೆಯಲ್ಲೇ ರೈಫಲ್’ನಲ್ಲಿ ಗುಂಡಿಕ್ಕಿ ಕೊಂದಿದ್ದಾನೆ.

22 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ ದುಷ್ಕರ್ಮಿ ಪರಾರಿಯಾಗಿದ್ದಾನೆ. ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.