ಅಪಘಾತವನ್ನು ತಡೆಯಲು ಹೆಲ್ಮೆಟ್ ಧರಿಸುವುದಕ್ಕಾಗಿ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದರೆ ಜೈಪುರದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ  ಬೈಕ್ ಸವಾರ ಹೆಲ್ಮೆಟ್’ನಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದಾನೆ.

ಜೈಪುರ(ಡಿ.16): ಅಪಘಾತವನ್ನು ತಡೆಯಲು ಹೆಲ್ಮೆಟ್ ಧರಿಸುವುದಕ್ಕಾಗಿ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದರೆ ಜೈಪುರದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಬೈಕ್ ಸವಾರ ಹೆಲ್ಮೆಟ್’ನಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದಾನೆ.

30 ವರ್ಷದ ರೋಹಿತ್ ಸಿಂಗ್ ಶೇಖಾವತ್ ತನ್ನ 22 ಲಕ್ಷ ಮೌಲ್ಯದ ಸೂಪರ್ ಬೈಕ್’ನಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಸಂಚರಿಸುವ ವೇಳೆ ಅಪಘಾತಕ್ಕೀಡಾಗಿ ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಆತ ಧರಿಸಿದ್ದ ಹೆಲ್ಮೆಟ್ ತೆಗೆಯಲಾಗದೇ ಬ್ರೈನ್ ಹ್ಯಾಮರೇಜ್’ನಿಂದ ಮೃತಪಟ್ಟಿದ್ದಾನೆ.

ಗಂಟೆಗೆ 300 ಕಿ.ಮೀ ಸಂಚರಿಸುವ ಸಾಮರ್ಥ್ಯ ಹೊಂದಿರುವ ಕವಾಸಾಕಿ ನಿಂಜಾ ಝಡ್ಎಕ್ಸ್10 ಆರ್ ಬೈಕ್’ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ ಇವರು 50 ಸಾವಿರ ಮೌಲ್ಯದ ಇಂಪೋರ್ಟೆಡ್ ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದೆ. ಈ ಹೆಲ್ಮೆಟ್ ಎಷ್ಟು ವೇಗವಾಗಿ ತೆರಳುತ್ತಿದ್ದರೂ ಕೂಡ ಅಲುಗಾಡುವುದಿಲ್ಲ. ಇದರಿಂದ ಅವರು ಕೆಳಕ್ಕೆ ಬಿದ್ದಾಗಲೂ ಹೆಲ್ಮೆಟ್ ತೆಗೆಯಲಾಗದೇ ಮೆದುಳಿನಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.