ಚಿಲ್ಲರೆ ಕಾಸಿನ ಕಾಫಿಯನ್ನು ಕಡಿಮೆ ಬೆಲೆಗೆ ಕುಡಿಯಲು ತಾನೋರ್ವ ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ನ್ಯೂಯಾರ್ಕ್ (ಡಿ.16): ಪತ್ರಕರ್ತರು, ಪೊಲೀಸರು, ಐಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಸರ್ಕಾರಿ ನೌಕರರ ಸೋಗಿನಲ್ಲಿ ಸಾರ್ವಜನಿಕರು ಮತ್ತು ಕೆಲವು ಉದ್ಯಮಿಗಳಿಗೆ ಲಕ್ಷಾಂತರ ರು. ಪಂಗನಾಮ ಹಾಕಿ ಪರಾರಿಯಾಗೋದು ಹೊಸ ವಿಷಯವೇನಲ್ಲ.

ಆದರೆ, ಚಿಲ್ಲರೆ ಕಾಸಿನ ಕಾಫಿಯನ್ನು ಕಡಿಮೆ ಬೆಲೆಗೆ ಕುಡಿಯಲು ತಾನೋರ್ವ ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ನ್ಯೂಯಾರ್ಕ್’ನಲ್ಲಿರುವ ಪ್ರಸಿದ್ಧ ಸ್ಟಾರ್ಬಕ್ಸ್ ಕಾಫೀ ಕೇಂದ್ರ ಮುಚ್ಚುವ ವೇಳೆ, ಪೊಲೀಸರ ಸೋಗಿನಲ್ಲಿ ಬಂದ ವ್ಯಕ್ತಿ ಕಾಫಿ ಕೊಡುವಂತೆ ಏರುಧ್ವನಿಯಲ್ಲಿ ಕೇಳಿದ್ದ. ಆದರೆ, ಅಷ್ಟೊತ್ತಿಗಾಗಲೇ ಅವನೋರ್ವ ನಕಲಿ ಪೊಲೀಸ್ ಎಂದು ತಿಳಿದ ಪೊಲೀಸರು, ಆತನನ್ನು ವಶಕ್ಕೆ ಪಡೆದರು.