ಈತನ ಶ್ವಾನ ಪ್ರೀತಿಗೆ ಸಲಾಂ: ಮೃತಪಟ್ಟ ನಾಯಿಗೆ ಅಂತಿಮ ವಿಧಿವಿಧಾನ..!

Man performed rituals to his pet Dog after death
Highlights

ಮೃತಪಟ್ಟ ಮುದ್ದಿನ ನಾಯಿಗೆ ಅಂತಿಮ ವಿಧಿವಿಧಾನ

ದಾವಣಗೆರೆಯ ಗಾರ ಮಂಜನ ಶ್ವಾನ ಪ್ರೀತಿ

ಪೂಜೆ- ವಿಶಿಷ್ಟ ಸಂಪ್ರದಾಯ ನೆರವೇರಿಕೆ

ಗೆಳೆಯನಂತಿದ್ದ ನಾಯಿ ಅಡವಿಗೆ ಅಂತಿಮ ವಿದಾಯ

ಬೆಂಗಳೂರು(ಜೂ.23): ಸಾಮಾನ್ಯವಾಗಿ ನಮ್ಮ ಪ್ರೀತಿಯ ಸಾಕು ಪ್ರಾಣಿಗಳು ಮೃತಪಟ್ಟರೆ ಒಂದಿಷ್ಟು ಮನಸ್ಸಿಗೆ ಬೇಜಾರುಮಾಡಿಕೊಂಡು ಅವುಗಳನ್ನು ಮಣ್ಣಿನಲ್ಲಿ ಮುಚ್ಚಿ ಹಾಕುವುದೇ ಹೆಚ್ಚು. ಆದ್ರೆ ಇಲ್ಲೊಬ್ಬ ಶ್ವಾನ ಪ್ರೇಮಿ ಮನುಷ್ಯರ ಸಾವಿನ ನಂತರ ಸಲ್ಲುವ ಎಲ್ಲಾ ಶವಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದ್ದಾನೆ. 

ದಾವಣಗೆರೆಯಲ್ಲಿ ನಡೆದಿರುವ ಈ ಶ್ವಾನ ಶವ ಸಂಸ್ಕಾರ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಆ ನಾಯಿಗು ಅವನಿಗು 13 ವರ್ಷದ ಅನುಬಂಧ. ಪ್ರೀತಿಯ ನಾಯಿ ಮೃತಪಟ್ಟಿದ್ದಕ್ಕೆ ತನ್ನ ಸಂಬಂಧಿಕರನ್ನೇ ಕಳೆದುಕೊಂಡಷ್ಟು ಆತ ದುಃಖಿಸಿದ್ದಾನೆ. ದಾವಣಗೆರೆ ಗಾಂಧಿನಗರದ ಗಾರ ಮಂಜ ತನ್ನ ಮುದ್ದಿನ ನಾಯಿ ಅಡವಿಯನ್ನು  ಕಳೆದುಕೊಂಡು ತನ್ನ ಸರ್ವಸ್ವ ವನ್ನು ಕಳೆದುಕೊಂಡಷ್ಟು ದುಃಖಿಸಿದ್ದಾನೆ.

ಗಾಂಧಿನಗರದಲ್ಲಿ  ಮೃತಪಟ್ಟ ಅಡವಿ  ಎಂಬ ಸಾಕು ನಾಯಿಗೆ ಪೆಂಡಾಲ್ ಹಾಕಿ ಅಂತಿಮ ದರ್ಶನ, ಅಂತ್ಯ ಸಂಸ್ಕಾರದ ವಿಧಿವಿಧಾನ ಪೂರೈಸಲಾಗಿದೆ. ಕಳೆದ ರಾತ್ರಿ  ಭಜನೆ ಮಾಡಿದ ಗಾರ್ ಮಂಜ ನೇತೃತ್ವದ ಯುವಕರ ತಂಡ  ಪೂಜೆ- ವಿಶಿಷ್ಟ ಸಂಪ್ರದಾಯ ನೆರವೇರಿಸಿದ್ದಾರೆ.

ಯುವಕರ ನೆಚ್ಚಿನ ನಾಯಿ  ಅಡಿವಿ ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿತ್ತು  ಮೃತಪಟ್ಟ ನಾಯಿಯನ್ನು ಸಾರ್ವಜನಿಕರ  ಅಂತಿಮ ದರ್ಶನಕ್ಕಿಟ್ಟಿದ್ದು ಇಂದು ಗಾಂಧಿನಗರ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.  ಗಾರ ಮಂಜ ಎಂಬ ಯುವಕ ಕಳೆದ 13 ವರ್ಷಗಳಿಂದ ಸಾಕಿದ್ದ   ನಾಯಿ  ಗೆಳೆಯನಂತಿತ್ತು. ಹೋದಲ್ಲಿ ಬಂದಲ್ಲಿ ಅವನ ಬಾಲ ಅಲ್ಲಾಡಿಸುತ್ತಾ  ಆತನಿಗೆ ಬೆಂಗಾವಲಾಗಿತ್ತು.  

ಒಬ್ಬ ಆತ್ಮೀಯ ಸ್ನೇಹಿತನಿಗೆ ಸಲ್ಲಬೇಕಾದ ಗೌರವ  ಅಡಿವಿ  ಸಲ್ಲಿಲಿ ಎಂದು ಮಂಜ ಹಾಗೂ ಯುವಕರ ತಂಡ ಗಾಂಧಿನಗರದಲ್ಲಿ ಮೃತ ನಾಯಿಯನ್ನು ಮೆರವಣಿಗೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಐವತ್ತಕ್ಕು ಹೆಚ್ಚು ಯುವಕರು ದಾವಣಗೆರೆ ನಗರದ ರುದ್ರಭೂಮಿಯಲ್ಲಿ ಅಡವಿ ಶವಸಂಸ್ಕಾರ ನೇರವೇರಿಸಿದ್ದಾರೆ. ಇದೀಗ ಮೂರು ದಿನದ ಶಾಸ್ತ್ರಕ್ಕು ಸಿದ್ಧತೆ ನಡೆಸಿದ್ದು ಅಡವಿ  ತಿಥಿ ಯಲ್ಲಿ ಹತ್ತಾರು ಜನರಿಗೆ ಊಟ ಹಾಕಲಿದ್ದಾರೆ.

loader