ಸಲಿಂಗಿ ಗೆಳೆಯನ ಕೊಂದು ಆತ್ಮಹತ್ಯೆಗೆ ಶರಣಾದ ಯುವಕ..!

news | Tuesday, June 5th, 2018
Suvarna Web Desk
Highlights

ಸಲಿಂಕಾಮಿಯೋರ್ವ ತನ್ನ ಗೆಳೆಯನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ರಾಜಧಾನಿ ಚೆನೈನಲ್ಲಿ ನಡೆದಿದೆ. ಇಲ್ಲಿನ ರಿಚಿ ಸ್ಟ್ರೀಟ್ ನ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸರವಣನ್ ಎಂಬಾತ ತನ್ನ ಸಲಿಂಗಿ ಗೆಳೆಯ ಪ್ರಭು ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಅದೇ ಅಂಗಡಿಯ ಫ್ಯಾನ್‌ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಚೆನೈ[ಜೂ.೫]: ಸಲಿಂಕಾಮಿಯೋರ್ವ ತನ್ನ ಗೆಳೆಯನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ರಾಜಧಾನಿ ಚೆನೈನಲ್ಲಿ ನಡೆದಿದೆ. ಇಲ್ಲಿನ ರಿಚಿ ಸ್ಟ್ರೀಟ್ ನ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸರವಣನ್ ಎಂಬಾತ ತನ್ನ ಸಲಿಂಗಿ ಗೆಳೆಯ ಪ್ರಭು ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಅದೇ ಅಂಗಡಿಯ ಫ್ಯಾನ್‌ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಭು ಮತ್ತು ಸರವಣನ್ ಇಬ್ಬರೂ ಸಲಿಂಗಿಗಳಾಗಿದ್ದು, ಈ ವಿಷಯ ಅವರಿಬ್ಬರ ಮನೆಯವರಿಗೂ ತಿಳಿದಿತ್ತು. ಆದರೆ ಈ ಸಂಬಂಧಕ್ಕೆ ಆತನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಅಂಗಡಿ ಮಾಲೀಕ ಎಷ್ಟೇ ಬುದ್ದಿವಾದ ಹೇಳಿದ್ದರೂ ಕೇಳದ ಸರವಣನ್,  ಮತ್ತೆ ಮತ್ತೆ ಪ್ರಭುವನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಕೊನೆಗೆ ಕಳೆದ ಭಾನುವಾರ ರಾತ್ರಿ ಪ್ರಭು ಅಂಗಡಿ ಬಂದ್ ಮಾಡಿ ಮಲಗಿದ್ದಾಗ ಆತನ ಮೇಲೆ ದಾಳಿ ಮಾಡಿದ ಸರವಣನ್. ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಪ್ರಭುವನ್ನು ಕೊಂದ ಬಳಿಕ ಸರವಣನ್ ಕೂಡ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಮೃತದೇಹಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments 0
Add Comment

  Related Posts

  Man assault by Jaggesh

  video | Saturday, April 7th, 2018

  Wife Commits Suicide in Yadgir

  video | Friday, March 30th, 2018

  Rail loco pilot Save Man

  video | Sunday, March 25th, 2018

  IPL Team Analysis Chennai Super Kings Team Updates

  video | Monday, April 9th, 2018
  nikhil vk