ಪತ್ನಿ ಪ್ರಿಯಕರನೆಂದು ಭಾವಿಸಿ, 14 ವರ್ಷದ ಮಗನನ್ನೇ ಕೊಂದ ಅಪ್ಪ

First Published 27, Jan 2018, 7:28 PM IST
man mistakes son as wifes lover brutally hacks him to death in Telengana
Highlights

ಪತ್ನಿಯ ಪ್ರಿಯಕರನೆಂದು ತಪ್ಪಾಗಿ ಭಾವಿಸಿ, ತನ್ನ 14 ವರ್ಷದ ಮಗನನ್ನು ತಂದೆಯೇ ಕೊಂದಿರುವ ಅಮಾನವೀಯ ಘಟನೆ ತೆಲಂಗಾಣದ ಕರ್ನೂಲ್ ಜಿಲ್ಲೆಯ ಗುಟುಪಳ್ಳೆಯಲ್ಲಿ ನಡೆದಿದೆ.

ಹೈದರಾಬಾದ್: ಪತ್ನಿಯ ಪ್ರಿಯಕರನೆಂದು ತಪ್ಪಾಗಿ ಭಾವಿಸಿ, ತನ್ನ 14 ವರ್ಷದ ಮಗನನ್ನು ತಂದೆಯೇ ಕೊಂದಿರುವ ಅಮಾನವೀಯ ಘಟನೆ ತೆಲಂಗಾಣದ ಕರ್ನೂಲ್ ಜಿಲ್ಲೆಯ ಗುಟುಪಳ್ಳೆಯಲ್ಲಿ ನಡೆದಿದೆ.

ಕೊಡಲಿಯಿಂದ ಮಗನ ಮೇಲೆ ತಂದೆ ಹಲ್ಲೆ ನಡೆಸಿದ್ದು, ಮಗನೆಂದು ತಿಳಿದಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಆದರೆ, ತಲೆ ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿದ್ದ ಮಗ ಕೊನೆಯುಸಿರೆಳೆದಿದ್ದಾನೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

loader