ಕಷ್ಟಪಟ್ಟು ದುಡಿವ ಬದಲು ತಮಿಳುನಾಡಿನ ವೃದ್ಧ ವ್ಯಕ್ತಿಯೊಬ್ಬ ಖತರ್ನಾಕ್ ಯೋಜನೆ ರೂಪಿಸಿ, 4.5 ಕೋಟಿ ರು. ಮೌಲ್ಯದ ಆಸ್ತಿ ಒಡೆಯನಾಗಿದ್ದಾನೆ.
ಕೊಯಮತ್ತೂರು(ಜ.09): ಕಷ್ಟಪಟ್ಟು ದುಡಿವ ಬದಲು ತಮಿಳುನಾಡಿನ ವೃದ್ಧ ವ್ಯಕ್ತಿಯೊಬ್ಬ ಖತರ್ನಾಕ್ ಯೋಜನೆ ರೂಪಿಸಿ, 4.5 ಕೋಟಿ ರು. ಮೌಲ್ಯದ ಆಸ್ತಿ ಒಡೆಯನಾಗಿದ್ದಾನೆ. ಆದರೆ, ಹಣ ಗಳಿಕೆ ವಾಮಮಾರ್ಗ ಬಯಲಾಗಿದ್ದು, ಶ್ರೀಕೃಷ್ಣ ಜನ್ಮಸ್ಥಾನ ಸೇರಿದ್ದಾನೆ. ತಮಿಳುನಾಡಿನ ವೆಲ್ಲಲೂರು ನಿವಾಸಿಯಾದ ಟ್ರಕ್ ಸಾರಿಗೆ ಕಂಪನಿಯೊಂದರ ಮಾಲೀಕ, ಆರೋಪಿ ಪುರುಷೋತ್ತಮನ್ ಅವರ ಪತ್ನಿ ಸಾವಿಗೀಡಾಗಿದ್ದು, ತಾಯಿ ಮತ್ತು ಪುತ್ರಿ(18) ಜತೆ ವಾಸವಾಗಿದ್ದಾನೆ.
ಶೀಘ್ರವೇ ಶ್ರೀಮಂತನಾಗಬೇಕೆಂಬ ದುರಾಸೆಯಿಂದ 8 ವರ್ಷಗಳಲ್ಲೇ 8 ಮಹಿಳೆಯರನ್ನು ವಿವಾಹವಾಗಿದ್ದ ಆರೋಪಿ, ಇದರಲ್ಲಿ ಇಬ್ಬರಿಗೆ 4.5 ಕೋಟಿ ರು. ಪಂಗನಾಮ ಹಾಕಿದ್ದ. ಈ ಕುರಿತು ಆರೋಪಿಯನ್ನು ವಿವಾಹವಾಗಿದ್ದ 3 ಸಂತ್ರಸ್ತೆಯರು ದೂರು ನೀಡಿದ್ದರು.
ಮೋಸ ಮಾಡಿದ್ಹೇಗೆ?: ಚೆನ್ನೈನ ಕಾಲೇಜಲ್ಲಿ ಉಪನ್ಯಾಸಕಿಯಾಗಿರುವ ಇಂದಿರಾ ಗಾಂಧಿ (45), ಆರೋಪಿ ಪುರುಷೋತ್ತಮನ್ (57)ನನ್ನು ವಿವಾಹವಾಗಿದ್ದರು. ಈ ವೇಳೆ, ಕೊಯಮತ್ತೂರಿನಲ್ಲೇ ನೆಲೆಸೋಣ. ಹಾಗಾಗಿ, ಚೆನ್ನೈನಲ್ಲಿರುವ ಮನೆಯನ್ನು ಮಾರುವಂತೆ ಇಂದಿರಾಗೆ ಆರೋಪಿ ಪುಸಲಾಯಿಸಿದ್ದ. ಇದರಿಂದ ಬಂದ 1.5 ಕೋಟಿಯನ್ನು ಆರೋಪಿ ಪಡೆದು, ಪರಾರಿಯಾಗಿದ್ದ. ಪೊಲೀಸರು ಈಗ ಈತನನ್ನು ಬಂಧಿಸಿದ್ದಾರೆ.
