ಸಾವಿರಾರು ಜನರಿಗೆ ಮೋಸ ಮಾಡಿರೋ ಮಹಾನ್​ ವಂಚಕ ಸಚಿನ್​ ನಾಯ್ಕ್​'ನಿಂದಾಗಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ವಂಚಕನಿಗೆ ಹಣ ಕೊಟ್ಟು ಅಮ್ಮನನ್ನು ಉಳಿಸಿಕೊಳ್ಳಲು ಹೆಣಗಾಡಿದವರಿದ್ದಾರೆ. ಕಳೆದುಕೊಂಡ ಹಣದ ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆಗೆ ಯತ್ನಿಸಿರುವವರು ಇದ್ದಾರೆ. ಸಚಿನ್​ ನಾಯ್ಕ್​ ಎಂಬ ವಂಚಕನ ಅಸಲಿಯತ್ತನ್ನ ಸುವರ್ಣ ನ್ಯೂಸ್​ ಜನರ ಮುಂದಿಡುತ್ತಲೇ ಇದೆ. ಈ ವಂಚಕನಿಂದ ಅದೆಷ್ಟೂ ಮಂದಿ ನೋವು ಅನುಭವಿಸಿದ್ದಾರೆ ಗೊತ್ತಾ..?

ಬೆಂಗಳೂರು(ಜ.18): ಸಾವಿರಾರು ಜನರಿಗೆ ಮೋಸ ಮಾಡಿರೋ ಮಹಾನ್​ ವಂಚಕ ಸಚಿನ್​ ನಾಯ್ಕ್​'ನಿಂದಾಗಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ವಂಚಕನಿಗೆ ಹಣ ಕೊಟ್ಟು ಅಮ್ಮನನ್ನು ಉಳಿಸಿಕೊಳ್ಳಲು ಹೆಣಗಾಡಿದವರಿದ್ದಾರೆ. ಕಳೆದುಕೊಂಡ ಹಣದ ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆಗೆ ಯತ್ನಿಸಿರುವವರು ಇದ್ದಾರೆ. ಸಚಿನ್​ ನಾಯ್ಕ್​ ಎಂಬ ವಂಚಕನ ಅಸಲಿಯತ್ತನ್ನ ಸುವರ್ಣ ನ್ಯೂಸ್​ ಜನರ ಮುಂದಿಡುತ್ತಲೇ ಇದೆ. ಈ ವಂಚಕನಿಂದ ಅದೆಷ್ಟೂ ಮಂದಿ ನೋವು ಅನುಭವಿಸಿದ್ದಾರೆ ಗೊತ್ತಾ..?

ಹಾಸನ ಮೂಲದ ಸತೀಶ್​ ಎಂಬುವರು ಟಿಜಿಎಸ್​ ಕನ್ಸ್​'ಟ್ರಕ್ಷನ್ಸ್​'ನಲ್ಲಿ ಫ್ಲಾಟ್​ ಬುಕ್​ ಮಾಡಿದ್ದರು. ಬೆಂಗಳೂರಿನಲ್ಲೊಂದು ಮನೆ ಮಾಡಿಕೊಳ್ಳಬೇಕು ಅನ್ನೋ ಅವರ ಆಸೆ ಸಚಿನ್​ ನಾಯ್ಕ್​ಗೆ ಹಣ ಕೊಡುವಂತೆ ಮಾಡಿತ್ತು. ಹಾಗೆ ಸಚಿನ್​ ನಾಯ್ಕ್​'ಗೆ ಸತೀಶ್​ ನಾಲ್ಕು ಕಂತುಗಳಲ್ಲಿ ಕೊಟ್ಟ ಹಣ ಐದು ಕಾಲು ಲಕ್ಷ. ಬೆಳಂದೂರಿನಲ್ಲಿ ನಿರ್ಮಾಣವಾಗುತ್ತಿದ್ದ ಟಿಜಿಎಸ್​ ಸಿಂಗಪೂರ್​ ಎನ್ನುವ ಪ್ರಾಜೆಕ್ಟ್​'ಗಾಗಿ ಹಣ ಕೊಟ್ಟಿದ್ದರು. ಇದೇ ಸಮಯದಲ್ಲಿ ಸತೀಶ್​ ತಾಯಿ ಕ್ಯಾನ್ಸರ್​'ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದರು. ಚಿಕಿತ್ಸೆಗಾಗಿ ಲಕ್ಷಾಂತರ ಹಣ ಬೇಕಿತ್ತು. ಈ ವೇಳೆ ತಮ್ಮ ಫ್ಲಾಟ್​ ಕ್ಯಾನ್ಸಲೇಷನ್​ ಮಾಡಿಸಿ ಹಣ ವಾಪಸ್​ ಕೊಡಿ ಅಮ್ಮನನ್ನು ಉಳಿಸಿಕೊಳ್ಳಬೇಕು ಎಂದರೂ ಸಚಿನ್ ನಾಯ್ಕ್​ ಎನ್ನುವ ವಂಚಕನ ಮನಸ್ಸು ಕರಗಿರಲಿಲ್ಲ. ಆತ ಕೊಟ್ಟ ಚೆಕ್​ ಬೌನ್ಸ್​ ಆಗಿತ್ತು.

ಇದಷ್ಟೇ ಅಲ್ಲದೆ ಸಚಿನ್ ನಾಯ್ಕ್​'ನ ನಿರ್ಧಯಿ ವಂಚನೆ ಇಷ್ಟಕ್ಕೇ ನಿಲ್ಲುವುದಿಲ್ಲ. ಸಾಲ ಮಾಡಿ ಹಣ ಕೊಟ್ಟಿದ್ದ ಬೆಂಗಳೂರಿನ ಪ್ರಭಾಕರ್​ ಅನ್ನುವವರು ತಮ್ಮ ಹಣಕ್ಕಾಗಿ ಪರದಾಡಿದ್ದಾರೆ. ನ್ಯಾಯ ಕೇಳಿ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಟಿಜಿಎಸ್​ ಬಾಗ್ಯಲಕ್ಷ್ಮೀ, ವೈಭವ ಲಕ್ಷ್ಮೀ ಎನ್ನುವ ಪ್ರಾಜೆಕ್ಟ್​'ಗಳಿಗೆ 9 ಲಕ್ಷದಷ್ಟು ಹಣ ಸಾಲ ಮಾಡಿ ಸಚಿನ್​ ನಾಯ್ಕ್​'ಗೆ ಕೊಟ್ಟಿದ್ದರು. ತಾವು ಕೊಟ್ಟ ಹಣವೂ ಸಿಗದೇ, ಫ್ಲಾಟ್​ ಕೂಡ ಸಿಗದೇ ಸಾಲಗಾರರ ಕಾಟಕ್ಕೆ ಬೇಸತ್ತು ಡೆತ್​ನೋಟ್​ ಬರೆದಿಟ್ಟು, ಟಿಜಿಎಸ್​ ಕಂಪನಿಯ ಮೋಸದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಪ್ರಭಾಕರ್​ ಬಂದಿದ್ದರು. ಆದರೆ ಈ ವಿಚಾರ ಮನೆಯಲ್ಲಿ ಗೊತ್ತಾಗಿದ್ದರಿಂದಾಗಿ ಅವರ ಪ್ರಾಣ ಉಳಿಯುವಂತಾಯಿತು.

ಇಷ್ಟೆಲ್ಲ ಆದರೂ ಸಚಿನ್​ ನಾಯ್ಕ್​ ಮೋಸಕ್ಕೊಳಗಾದ ಇಂತಹ ಸಾವಿರಾರು ಅಮಾಯಕರಿಗೆ ಹಣ ಕೊಟ್ಟಿಲ್ಲ. ಕಷ್ಟಪಟ್ಟು ಕೂಡಿಟ್ಟಿದ್ದ ಹಣ ತಿಂದವನಿಗೆ ಕಳೆದುಕೊಂಡವರು ಪ್ರತಿದಿನ ಹಿಡಿ ಶಾಪ ಹಾಕುತ್ತಿದ್ದಾರೆ.