ಚಿಕಿತ್ಸೆಗಾಗಿ ಸುಮಾರು 60 ಸಾವಿರ ಹಣವನ್ನೂ ಸಹ ಕಳೆದುಕೊಂಡ ಯುವಕನಿಗೆ ದಿಕ್ಕೆ ತೋಚದಂತಾಗಿದ್ದು, ನ್ಯಾಯಕ್ಕಾಗಿ ಮಾಧ್ಯಮಗಳ ಮುಂದೆ ತನ್ನ ಗೋಳನ್ನು ತೋಡಿಕೊಂಡಿದ್ದಾನೆ.

ಧಾರವಾಡ(ಸೆ.11): ಕೂದಲು ಉದುರುವುದನ್ನ ತಡೆಗಟ್ಟಲು ಹೋದ ಯುವಕನೊಬ್ಬ ಈಗ ಸಂಪೂರ್ಣ ಬೋಳನಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಗಂಗಾಧರ ಹೂಗಾರ ಎಂಬ ಯುವಕನಿಗೆ ವಿಪರೀತ ತಲೆಕೂದಲು ವಿಪರೀತ ಉದುರುತ್ತಿತ್ತು. ಹೀಗಾಗಿ ಹುಬ್ಬಳ್ಳಿ ಮೂಲದ ಖಾಸಗಿ ಕಂಪನಿಯೊಂದರಲ್ಲಿ ಚಿಕಿತ್ಸೆ ಪಡೆದಿದ್ದ.

ಇದೀಗ ಅವರ ಟ್ರೀಟ್​ ಮೆಂಟ್​'ನಿಂದ ಯುವಕನ ತಲೆಕೂದಲು, ಹುಬ್ಬಿನ ಕೂದಲು ಸಂಪೂರ್ಣ ಉದುರಿ ಹೋಗಿದೆ. ಮೈಮೇಲಿನ ಕೂದಲು ಸಹ ಉದುರುತ್ತಿದೆಯಂತೆ. ಸುಂದರವಾಗಿದ್ದ ಗಂಗಾಧರ ಹೂಗಾರ ಇದೀಗ ಸಂಪೂರ್ಣ ಬೋಳಾಗಿದ್ದು, ಕಂಗಾಲಾಗಿದ್ದಾನೆ.

ಚಿಕಿತ್ಸೆಗಾಗಿ ಸುಮಾರು 60 ಸಾವಿರ ಹಣವನ್ನೂ ಸಹ ಕಳೆದುಕೊಂಡ ಯುವಕನಿಗೆ ದಿಕ್ಕೆ ತೋಚದಂತಾಗಿದ್ದು, ನ್ಯಾಯಕ್ಕಾಗಿ ಮಾಧ್ಯಮಗಳ ಮುಂದೆ ತನ್ನ ಗೋಳನ್ನು ತೋಡಿಕೊಂಡಿದ್ದಾನೆ.

ಇನ್ನು ಯುವಕನಿಗೆ ಚಿಕಿತ್ಸೆ ನೀಡಿದ ಖಾಸಗಿ ಕಂಪನಿಯನ್ನು ಕೇಳಲು ಹೋದರೆ, ಯಾವುದೇ ರೀತಿ ಸ್ಪಂದಿಸದೇ ಇನ್ನೂ ಚಿಕಿತ್ಸೆ ಬಾಕಿ ಇದೆ ಅಂತಿದಾರಂತೆ.